ದಾಂಡೇಲಿ:
ಸಾಮಾಜಿಕ ಜಾಲತಾಣಗಳನ್ನು ಇಂದು ಯುವ ಸಾಮುದಾಯ ದುರ್ಬಳಕೆ ಮಾಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಅಪರಿಮಿತ ಅವಕಾಶಗಳಿವೆ. ನೀವೆಲ್ಲ ಜ್ಞಾನ ಸಂಪಾದನೆ ಹಾಗೂ ಉದ್ಯೋಗ ಭದ್ರತೆಗಾಗಿ ಅವುಗಳನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಿ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ ಜೈನ್ ಅವರು ಕರೆ ನೀಡಿದರು. ಅವರು ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ ಎಂಬ ವಿಷಯದ ಗುಂಪುಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಅಜೀತ್ ಅಂಬಿಗ ಅವರು ಸಾಮಾಜಿಕ ಜಾಲತಾಣಗಳ ಹುಟ್ಟು ಬೆಳವಣಿಗೆ ಹಾಗೂ ಸಾಧಕ-ಬಾಧಕ ಬಗ್ಗೆ ವಿವರಿಸಿದರು. ಬಸವರಾಜ ಹೂಲಿಕಟ್ಟಿಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಶಾರದಾ ದೇಸಾಯಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಕ್ಷಿತಾ ಭಜಂತ್ರಿ ಪರಿಚಯಿಸಿದರು ಹಾಗೂ ವಸುಂದರಾ ದಳವಿ ವಂದಿಸಿದರು ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ ಎಂಬ ವಿಷಯದ ಗುಂಪುಚರ್ಚೆಯಲ್ಲಿ ಪತ್ರಕರ್ತ ಸಂದೇಶ ಜೈನ ಮಾತನಾಡಿದರು
