ದಾಂಡೇಲಿ: ಹಲವಾರು ವರ್ಷಗಳಿಂದ ಕಾರ್ಯನಿರವಹಿಸುತ್ತಿರುವ ಅಂಚೆ ಇಲಾಖೆಯ ದಾಂಡೇಲಿಯ ಹಳೆದಾಂಡೇಲಿ (ಬಜಾರ), ಕುಳಗಿ ರಸ್ತೆ, ಹಾಗೂ ಪೇಪರ್ ಮಿಲ್ ನ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನ ಮಾಡದಂತೆ ಹಾಗೂ ಇದ್ದ ಸ್ಥಳದಲ್ಲಿಯೇ ಶಾಖಾ ಕಚೇರಿಗಳನ್ನ ಮುಂದುವರೆಸುವಂತೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಂಚೆ ಇಲಾಖೆಯ ಧಾರವಾಡ ವಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸುಮಾರು 40-45 ವರುಷಗಳಿಂದ ಹಳೆ ದಾಂಡೇಲಿ ಬಜಾರ್ನಲ್ಲಿ, ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಹಾಗೂ ಬಂಗೂರನಗರದಲ್ಲಿ ಉಪ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಹಳೆ ದಾಂಡೇಲಿಯೂ ದಾಂಡೇಲಿ ನಗರದ ಮೂಲ ನಗರವಾಗಿದ್ದು ಸುಮಾರು 125 ವರುಷಗಳ ಇತಿಹಾಸವನ್ನು ಹೊಂದಿರುವ ಹಳೆ ನಗರವಾಗಿದೆ. ಈ ಭಾಗದಲ್ಲಿ ಸುಮಾರು 20 ಸಾವಿರ ಜನಸಂಖ್ಯೆ ಇರುತ್ತದೆ. ಅಂಚೆ ಕಚೇರಿಯ ಹತ್ತಿರದಲ್ಲಿ ಸ್ವಾಮಿಲ್, ಪಾರೆಸ್ಪ ಡಿಮೋ, ಪೋಲಿಸ್ ಉಪಾಧಿಕ್ಷಕರ ಕಚೇರಿ, ಅರಣ್ಯ ಇಲಾಖೆಗೆ ಸಂಭಂದ ಪಟ್ಟ, ನಿದೇಶಕರು-ಕಾಳಿ ಹುಲಿ ಸಂರಕ್ಷಣಾ ಪ್ರದೇಶ ರವರ ಕಚೇರಿ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿಗಳ ಕಚೇರಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಮರ ಮಟ್ಟುಗಳ ಕಚೇರಿ ಇತ್ಯಾದಿ ಕಚೇರಿಗಳು ಈ ಭಾಗಾದಲ್ಲಿ ಇವೆ, ಈ ಕಚೇರಿಯಲ್ಲಿ ಸುಮಾರು 10 ಸಾವಿರ ಜನರು ವ್ಯವಹಾರ ನಡೆಸುತ್ತ ಇದ್ದಾರೆ. ಅದರಲ್ಲಿ ಸುಮಾರು 1000 ಜನ ಅಂಗವಿಕಲ, ಸಂದ್ಯಾ ಸುರಕ್ಷಾ, ವಿದವಾ ವೇತನ, ಇತ್ಯಾದಿಗಳ ಸೌಲ್ಯಭ್ಯವನ್ನು ಜನ ಪಡೆಯುತ್ತಾ ಇದ್ದಾರೆ.
ಕುಳಗಿ ರಸ್ತೆಯಲ್ಲಿರುವ ಶಾಖಾ ಕಚೇರಿ ಹಸಲಮಡ್ಡಿ, ಕರಿಯಂಪಾಲಿ, ಕೋಗಿಲಬನ, ಆಲೂರು ಸೇರಿದಂತೆ ಹಲವು ಪ್ರದೇಶ ವ್ಯಾಪ್ತಿ ಹೊಂದಿದ್ದು, ಇಲ್ಲಿಯೂ ಸಹ 8 ಸಾವಿರದಷ್ಟು ಖಾತೆಗಳಿವೆ.
ಹೀಗಿರುವಾಗ ಮುಖ್ಯ ಕಚೇರಿಯೊಂದಿಗೆ ಶಾಖಾ ಕಚೇರಿಗಳನ್ನು ಸೇರ್ಪಡೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಈ ಭಾಗದ ಜನರು ಬಹಳ ತೊಂದರೆ ಅನುಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಹಳೆ ದಾಂಡೇಲಿ -ಬಜಾರ್ ಅಂಚೆ ಕಚೇರಿ, ಕುಳಗಿ ರಸ್ತೆ ಹಾಗೂ ಬಂಗೂರನಗರದ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗೆ ಸೇರ್ಪಡೆ ಮಾಡದೆ ಈಗಿರುವ ಸ್ಥಳದಲ್ಲೇ ಮುಂದುವರೆಯುಂತೆ ಸೂಕ್ತ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಒಂದು ವೇಳೆ ಈ ಶಾಖಾ ಅಂಚೆ ಕಚೇರಿಗಳನ್ನು ಮುಖ್ಯ ಅಂಚೆ ಕಚೇರಿಗೆ ಸೇರಿಸಿದ್ದಲ್ಲಿ ಉಗ್ರ ಹೋರಾಟ ನಡೆಸುವುದೂ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
.
ಮನವಿ ಸ್ವೀಕರಿಸಿದ ಅಂಚೆ ಇಲಾಖೆಯ ಧಾರವಾಡ ವಲಯದ ಅಧಿಕಾರಿಗಳು 2.5. ಕಿ.ಮಿ. ಗಿಂತ ದೂರವಿದ್ದರೆ ಅಂತಹ ಶಾಖಾ ಕಚೇರಿಗಳನ್ನು ವಿಲೀನ ಮಾಡುವುದಿಲ್ಲ. ಹಾಗೂ ಉಳಿದ ಶಾಖಾ ಕಚೇರಿಗಳನ್ನೂ ಸಹ ಇದ್ದ ಸ್ಥಲಕದಲ್ಲಿಯೇ ಮುಮನದುವರೆಸುವ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿವಾಕರ ನಾಯ್ಕ, ಅನಿಲ ನಾಯ್ಕರ, ರಾಮಲಿಂಗ ಜಾಧವ, ಪರಶುರಾಮ ಮುಂತಾದವರಿದ್ದರು.
