ದಾಂಡೇಲಿ:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ ಪಕ್ಷವು ಬುದ್ಧ, ಬಸವ ಅಂಬೇಡ್ಕರರವರ ತತ್ವ ಸಿದ್ದಾಂತದೊಂದಿಗೆ ಭಾರತದ ಸಂವಿಧಾನವನ್ನು ಒಪ್ಪಿಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಸಿದ್ದಾಂತದೊಂದಿಗೆ ನಡೆಯುವ ಪಕ್ಷವಾಗಿದೆ.
ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ವಿವಾದಾತ್ಮಕವಾಗಿಸುವಂತೆ ವರ್ತಿಸುತ್ತಿದೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ್ಯ ಮೋಹನ ಹಲವಾಯಿ ಹೇಳಿದರು.ಅವರು ಇಂದು ಬೆಳಿಗ್ಗೆ ಕಾಂಗ್ರೆಸ ಭವನದಲ್ಲಿ ಮಾದ್ಯಮದೊಂದಿಗೆ ಮಾತನಾಡುತ್ತ ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಹೇಳಿಕೆಯ ಉದ್ದೇಶ ಸಮಾಜದಲ್ಲಿ ದ್ವೇಷ ಅಥವಾ ಶಾಂತಿಯನ್ನು ಕದಡಿ ವೈಷಮ್ಯವನ್ನು ಉಂಟು ಮಾಡುವುದಲ್ಲ. ಬದಲಾಗಿ ಅದನ್ನು ವಿಶಾಲ ಮನಸ್ಸಿನಿಂದ ನೋಡಿ ಅದರ ಮೂಲಾರ್ಥವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ ಪಕ್ಷದ ಇತಿಹಾಸ ತ್ಯಾಗ ಮತ್ತು ಬಲಿದಾನ ದೇಶಭಕ್ತಿಯಿಂದ ಕೂಡಿದ. ಶತಮಾನದ ಇತಿಹಾಸ ಇರುವ ಕಾಂಗ್ರೆಸ ಸ್ವಾತಂತ್ಯ ಹೋರಾಟದಲ್ಲಿ ತನ್ನ ಅನೇಕ ನಾಯಕರನ್ನು ಬಲಿದಾನ ಕೊಟ್ಟಿದೆ. ಸಾವಿರಾರು ನಾಯಕರು ಜೈಲು ಪಾಲಾಗಿದ್ದಾರೆ. ಅವರ ಹೋರಾಟ, ಬಲಿದಾನದ ಪಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಶಾಂತಿಯಿಂದ ಜಿವಿಸುತ್ತಾ ಇದ್ದೇವೆ.
ದೇಶದ ಎಲ್ಲ ರಾಜಿಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ನಮ್ಮ ದೇಶದ ಸಂವಿಧಾನದ ಆಶಯದಂತೆ ಶಾಂತಿ, ದೇಶದ ಏಕತೆ ಮತ್ತು ಸಾಮರಸ್ಯಕ್ಕೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಜವಾಬ್ದಾರಿಯಾಗಿದೆ. ಇದನ್ನು ಬಿಟ್ಟು ಸಾರ್ವಜನಿಕರಲ್ಲಿ ದ್ವೇಷ ಬಿತ್ತಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದನ್ನು ನಾವು ವಿರೋದಿಸುತ್ತೇವೆ ಎಂದು ಹೇಳಿದರು ಇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಉಪಾಧ್ಯಕ್ಷ ಬಶಿರ ಗಿರಿಯಾಳ,ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ,ಖಜಾಂಚಿ ದಿವಾಕರ ನಾಯ್ಕ,ರಾಮನಿಂಗ ಜಾಧವ ಆರ ಪಿ. ನಾಯ್ಕ ಉಪಸ್ಥಿತರಿದ್ದರು.
