ಕಾರವಾರ: ಪೃಕೃತಿ ಇನ್ಪಾಇನ್ಪೆಕ್ಟ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿರುವ ರಜವೀರ ಉದಯ ತಳ್ಳೆಕರ್ ಮೇಲೆ ಹಲವರು ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೂವರನ್ನು ಗುರುತಿಸಿದ ರಜವೀರ್ ಪೊಲೀಸ್ ದೂರು ನೀಡಿದ್ದಾರೆ.
ವಿನೋದ ಮಾಳಸೇಕರ್, ಸಂದೇಶ ನಾಯ್ಕ ಹಾಗೂ ಶುಭಂ ಕೋಚ್ರೇಕರ್ ಹಲ್ಲೆ ಮಾಡಿದವರು. ರಜವೀರ ತಳ್ಳೆಕರ್ ಅವರು ಅಕ್ಟೊಬರ್ 5ರ ಸಂಜೆ ಕಾರವಾರ ಕಡಲತೀರದಲ್ಲಿದ್ದಾಗ ಮೂರು ಬೈಕುಗಳಲ್ಲಿ ಅಲ್ಲಿಗೆ ಬಂದ ಆರೋಪಿತರು ಮುಖಕ್ಕೆ ಬೈಕಿನ ಲೈಟ್ ಬಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದಾಗ ಮುಖದ ಗುದ್ದಿ ಪರಾರಿಯಾಗಿದ್ದಾರೆ. ಇದಾದ ನಂತರ ಅಕ್ಟೊಬರ್ 10ರಂದು ರಾತ್ರಿ ರಜವೀರ್ ಕಡಲತೀರದಲ್ಲಿರುವುದನ್ನು ನೋಡಿ ಮತ್ತೆ ಅಲ್ಲಿಗೆ ಬಂದು ಥಳಿಸಿದ್ದಾರೆ.
ಇದಾದ ನಂತರ ಕಾಜುಭಾಗದಲ್ಲಿ ಮತ್ತೆ ಸಿಕ್ಕಿದ ಈ ಮೂವರು ಅಲ್ಲಿಯೂ ಹೊಡೆದಿದ್ದಾರೆ. ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ಗಾಯಗೊಳಸಿದ್ದಾರೆ. `ನಿನ್ನನ್ನು ಜಾಬಿನಿಂದ ತೆಗೆಸುವೆ\’ ಎಂದು ಬೆದರಿಸಿದ್ದಾರೆ. ಮೂಗಿನಿಂದ ರಕ್ತ ಸೋರಿದ ಕಾರಣ ರಜವೀರ್ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಂಡು ಪೊಲೀಸ್ ದೂರು ನೀಡಿದ್ದಾರೆ.