ಸಿದ್ದಾಪುರ: ಬೇಡ್ಕಣಿಯ ನಾಜೀಮಾ ಮಹಮದ್ ಪಾರುಕ್ ಸಾಬ್ ಎಂಬಾತರ ಮೇಲೆ ಅರ್ಪಾತ್ ಜಬ್ಬಾರ್ ಸಾಬ್ ಎಂಬಾತ ಹಲ್ಲೆ ನಡೆಸಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.
ನಾಜೀಮಾ ಅವರ ಗಂಡನ ಮಲತಾಯಿ ಮಗನಾಗಿದ್ದ ಅರ್ಪಾತ್ ಆಗಾಗ ನಾಜೀಮಾ ಅವರ ಮನೆಗೆ ಬರುತ್ತಿದ್ದ. ರಂಜಾನ್ ಅವಧಿಯಲ್ಲಿ ನಾಜೀಮಾ ಅವರ ಮನೆಯಲ್ಲಿಯೇ ಉಳಿದು ಊಟ ಸೇವಿಸುತ್ತಿದ್ದ. ಎರಡು ವರ್ಷದ ಹಿಂದೆ ತುರ್ತು ಅಡಚಣೆ ಎಂದು ಹೇಳಿ ನಾಜೀಮಾ ಬಳಿ ಹಣ ಕೇಳಿದ್ದ. ಆಗ ಅವರು 43 ಗ್ರಾಂ ಬಂಗಾರದ ಬಳೆಗಳನ್ನು ನೀಡಿದ್ದರು. ಅದನ್ನು ಅಡವಿಟ್ಟು ಹಣ ಪಡೆಯುವಂತೆಯೂ ನಂತರ ಬಳೆ ಹಿಂತಿರುಗಿಸುವ0ತೆಯೂ ಸೂಚಿಸಿದ್ದರು.
ಆದರೆ, ಈವರೆಗೂ ಆತ ಬಳೆ ಹಿಂತಿರುಗಿಸಿರಲಿಲ್ಲ. ಹೀಗಾಗಿ ಅಕ್ಟೊಬರ್ 7ರಂದು ನಾಜಿಮಾ ತನ್ನ ಗಂಡ ಹಾಗೂ ಮಗಳ ಜೊತೆ ಅರ್ಪಾತ್ ಜಬ್ಬಾರ್ ಸಾಬ್ ಮನೆಗೆ ಹೋಗಿ ವಿಚಾರಿಸಿದ್ದರು. `ತನ್ನ ಬಳೆ ತನಗೆ ಕೊಡು\’ ಎಂದು ನಾಜೀಮಾ ಪಟ್ಟು ಹಿಡಿದಾಗ ಅರ್ಪಾತ್ ನಾಜೀಮಾರ ತಲೆಯನ್ನು ಹಿಡಿದು ಗೋಡೆಗೆ ಜಜ್ಜಿದ್ದಾನೆ. ಅದಾದ ನಂತರ ತಲೆ, ಬೆನ್ನು, ಹೊಟ್ಟೆಗೆ ಹೊಡೆದು ನೋವುಂಟು ಮಾಡಿದ್ದಾನೆ.
`ಬಳೆಯನ್ನು ಕೊಡಲ್ಲ. ಹಣವು ಇಲ್ಲ\’ ಎಂದಿರುವ ಆತ `ಮತ್ತೆ ಬಂದರೆ ಕೊಲೆ ಮಾಡುವೆ\’ ಎಂದು ಬೆದರಿಸಿದ್ದಾನೆ.