ಯಲ್ಲಾಪುರ: ಸುರಿದ ಧಾರಾಕಾರ ಮಳೆಗೆ ಕಳಚೆ ಊರಿನ ಹೊಸಕುಂಬ್ರಿ-ಶoಬಡೆಮನೆಕೇರಿಯ (ಕೊರಟಕೆರೆ) ಸೇತುವೆ ಕೊಚ್ಚಿ ಹೋಗಿದೆ.
ಕಳೆದ ಮಾರ್ಚ ತಿಂಗಳಿನಲ್ಲಿ 2 ಲಕ್ಷ ರೂ ವ್ಯಯಿಸಿ ಹೊಸ ಸೇತುವೆ ನಿರ್ಮಿಸಲಾಗಿತ್ತು. ವ್ಯಕ್ತಿಯೊಬ್ಬರು ಸೇತುವೆಗೆ ಅಗತ್ಯವಿರುವ ಪೈಪನ್ನು ನೀಡಿದ್ದರು. ಅದನ್ನು ಬಳಸಿಕೊಂಡು ಎರಡು ಕಡೆ ವಾಲ್ ನಿರ್ಮಿಸಿ ನೂತನ ಸೇತುವೆಯನ್ನು ಉದ್ಘಾಟನೆ ಮಾಡಲಾಗಿತ್ತು. ಜುಲೈನಲ್ಲಿ ಸುರಿದ ಮಳೆಗೆ ಸೇತುವೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ಮಂಗಳವಾರ ಸುರಿದ ಮಳೆಗೆ ಸೇತುವೆ ಸಂಪೂರ್ಣವಾಗಿ ನೆಲಕಚ್ಚಿದೆ.
ಜಿಲ್ಲಾ ಪಂಚಾಯತಗೆ ಸೇರಿದ ರಸ್ತೆ ಓಡಾಟಕ್ಕೆ ಅನುಕೂಲವಾಗುವಂತೆ ಕೊರಟಗೆರೆ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಇದಾಗಿತ್ತು. ಕಳೆದ ಬಾರಿ ಸೇತುವೆಯ ಒಂದು ಭಾಗ ಕುಸಿತವಾದಾಗ ಅಧಿಕಾರಿಗಳು ಭೇಟಿ ನೀಡಿದ್ದರು. ಆಗ, `ಕಳಪೆ ಕಾಮಗಾರಿಯೇ ಸೇತುವೆ ಕುಸಿತಕ್ಕೆ ಕಾರಣ\’ ಎಂದು ಜನ ದೂರಿದ್ದರು. ಪ್ರಸ್ತುತ ಸಂಪೂರ್ಣ ಸೇತುವೆ ಕುಸಿತ ಕಾರಣ 30 ಕುಟುಂಬದವರ ಓಡಾಟಕ್ಕೆ ಕಷ್ಟವಾಗಿದೆ. ಪುಟ್ಟ ಸೇತುವೆ ದೊಡ್ಡ ನಡುವೆ ಹೊಂಡವಾಗಿದ್ದು, ವಾಹನ ಓಡಾಟ ಸಾಧ್ಯವಿಲ್ಲ.