
ಗೋಕರ್ಣದ ರುದ್ರಕಾಳಿ ಹಾಗೂ ಸ್ಮಶಾನಕಾಳಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ ಜೋರಾಗಿದೆ.
ನಿತ್ಯ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸೇರಿ ವಿವಿಧ ಸೇವೆಗಳಿಗೆ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅಕ್ಟೋಬರ್ 11ರಂದು ಭಕ್ತರು ಹರಕೆ ನೀಡುವ ಕಾರ್ಯಕ್ರಮ ನೆರವೇರಲಿದೆ. ಇಷ್ಟಾರ್ಥ ಸಿದ್ದಿಗೆ ಹರಕೆ ಹೇಳಿಕೊಳ್ಳುವುದು ಇಲ್ಲಿನ ವಾಡಿಕೆ. ಹೀಗಾಗಿ ದೇಶದ ನಾನಾ ಭಾಗದಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ.