ಯಲ್ಲಾಪುರ: ಉಮಚ್ಗಿಯ ಸೊಸೈಟಿ ಬಳಿ ಮಟ್ಕಾ ಆಡಿಸುತ್ತಿದ್ದ ನಾಗೇಶ ರಾಮಪ್ಪ ವಡ್ಡರ್ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಜನರಿಂದ ಸಂಗ್ರಹಿಸಿದ್ದ 1800ರೂ ಸಿಕ್ಕಿದೆ.
ಕೂಲಿ ಕೆಲಸ ಮಾಡುವ ನಾಗೇಶ್ ವಡ್ಡರ್ ಅಕ್ಟೊಬರ್ 8ರಂದು ಮಟ್ಕಾ ಆಡಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಯಿತು. ಈ ಹಿನ್ನಲೆ ಪೊಲೀಸ್ ಉಪ ನಿರೀಕ್ಷಕ ಮಹಾವೀರ ಕಾಂಬಳೆ ನಿಗಾ ಇರಿಸಿದ್ದರು. ಸ್ಥಳಕ್ಕೆ ಪೊಲೀಸರು ಬಂದರೂ ಅದರ ಅರಿವಿಲ್ಲದೇ 1ರೂಪಾಯಿಗೆ 80ರೂ ನೀಡುವುದಾಗಿ ನಾಗೇಶ್ ವಡ್ಡರ್ ಜನರಿಂದ ಹಣ ಸಂಗ್ರಹಿಸುತ್ತಿರುವಾಗಲೇ ಮಾಹಾವೀರ ಕಾಂಬಳೆ ತಮ್ಮ ತಂಡದೊAದಿಗೆ ದಾಳಿ ಮಾಡಿದರು. ಕಾನೂನು ಮೀರಿ ಜೂಜಾಟ ನಡೆಸುತ್ತಿರುವ ಕಾರಣ ಪ್ರಕರಣ ದಾಖಲಿಸಿಕೊಂಡಿದ್ದು, ಯಲ್ಲಾಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ರಾಘವೇಂದ್ರ ನಾಯ್ಕ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.