
ಕಾರವಾರ:
ನಗರದಲ್ಲಿ ಭಾನುವಾರ ನಡೆದ ಸಂತೆಯಲ್ಲಿ ವ್ಯಾಪಾರಿಯೋರ್ವ ಸೊಪ್ಪು ತರಕಾರಗಳ ಮೇಳೆ ನೀರು ಹಾಕುವಾಗ ಎಂಜಲು ಉಗಿದು ದುಷ್ಕೃತ್ಯ ಎಸಗಿದ ಘಟನೆ ಇಲ್ಲಿನ ಪಿಕಳೆ ರಸ್ತೆಯ ಬಳಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಮೂಲಕ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಜಲು ಉಗಿದ ವ್ಯಾಪಾರಿ. ಈತನು ತನ್ನ ಅಂಗಡಿಯಲ್ಲಿ ವಿವಿಧ ಸೊಪ್ಪುಗಳನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದ. ಸೊಪ್ಪಿಗೆ ನೀರು ಹೊಡೆಯುವಾಗ ಜೊತೆಗೆ ಎಂಜಲು ಕೂಡ ಉಗಿಯುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ದೃಶ್ಯವನ್ನು ಸಾರ್ವಜನಿಕರು ಸೆರೆಹಿಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.