
ಕಾರವಾರ:
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಬಂದೋಬಸ್ತಿಗೆ ಜಿಲ್ಲೆಯಿಂದ 400 ಗೃಹ ರಕ್ಷಕ ಸಿಬ್ಬಂದಿ ತೆರಳಿದ್ದಾರೆ.
ಸಿಬ್ಬಂದಿಯ ತಂಡವು ಕೊಲ್ಲಾಪುರ ಜಿಲ್ಲೆಗೆ ತಲುಪಲಿದ್ದು, ತಂಡವು 50 ಮಹಿಳಾ ಗೃಹ ರಕ್ಷಕ ಸಿಬ್ಬಂದಿಯನ್ನು ಹೊಂದಿದೆ. ಜಿಲ್ಲೆಯ ಸಿಬ್ಬಂದಿಯು ನ. 21 ರವರೆಗೆ ಚುನಾವಣಾ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲಿದ್ದು, ಅವರಿಗೆ ಮಹಾರಾಷ್ಟ್ರ ಸರಕಾರವು ದಿನಕ್ಕೆ 1,080 ರೂ. ಭತ್ಯೆ ನೀಡಲಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ. ಸಂಜು ನಾಯಕ ತಿಳಿಸಿದ್ದಾರೆ.