
ಕಾರವಾರ:
ಕಾರವಾರದ ಗಡಿ ಗ್ರಾಮವಾದ ಮಾಜಾಳಿಯ ರಾಮನಾಥ ದೇವಸ್ಥಾನದಲ್ಲಿ ಸೋಮವಾರ ಬೃಹತ್ ಬಲೂನನ್ನು ಹಾರಿಸುವ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು.
ಬೆಳಿಗ್ಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಬಳಿಕ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ ಮಾಡಲಾಯಿತು. ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದ ಬೃಹತ್ ಗಾತ್ರದ ವಾಫರ್ ಬಲೂನ್ನನ್ನು ಬಿಡಲಾಯಿತು. ಗ್ರಾಮದ ಯುವಕರು ಒಟ್ಟಾಗಿ ಸೇರಿ ಬೃಹತ್ ಬಲೂನಿಗೆ ಕೆಳಗಡೆ ಬೆಂಕಿಯಿಂದ ಬಿಸಿ ಗಾಳಿ ತುಂಬಿ ಬಳಿಕ ಅದನ್ನು ಪಲ್ಲಕ್ಕಿ ಬಂದ ಸಂದರ್ಭದಲ್ಲಿ ಹಾರಿ ಬಿಡಲಾಯಿತು.