
ಅಂಕೋಲಾ:
ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬಳ ಎ.ಟಿ.ಎಮ್ ಕಾರ್ಡನ್ನು ತೆಗೆದುಕೊಂಡು ವಂಚಿಸಿದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕಾಪಟ್ಟಣದ ಅರುಣಕುಮಾರ ಮಲ್ಲೇಶಪ್ಪಾ ಬಂಧಿತ ವ್ಯಕ್ತಿ.
ಸಕಲಬೇಣದ ಸುರೇಖಾ ಸುದೀರ ನಾಯ್ಕ ಎಂಬುವವರು ಕಳೆದ ಅಕ್ಟೋಬರ್ 22ರಂದು ಮಧ್ಯಾಹ್ನ ಎಸ್ ಬಿ ಐ ಬ್ಯಾಂಕ್ ಹತ್ತಿರ ಹಣ ತೆಗೆಯುವ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಪಿನ್ ನಂಬರ್ ತಿಳಿದುಕೊಂಡು ಬೇರೊಂದು ಕಾರ್ಡ್ ನೀಡಿದ್ದ. ನಂತರ ಅಲ್ಲಿಂದ ಕುಮಟಾಗೆ ಹೋಗಿ ಸುರೇಖಾ ಅವರ ಖಾತೆಯ ಎಟಿಎಮ್ ಬಳಸಿ ಖಾತೆಯಿಂದ 40 ಸಾವಿರ ರೂಪಾಯಿಗಳನ್ನು ತೆಗೆದು ಮೋಸ ಮಾಡಿದ್ದ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ನವೆಂಬರ್ 9ರಂದು ಬೆಳಸೆಯ ಉಮೇಶ ವಾಸು ಗೌಡ ಎಂಬುವವರು ಕೂಡ ದೂರು ದಾಖಲಿಸಿ ಎಸ್ ಬಿ ಐ ಬ್ಯಾಂಕ್ ಹತ್ತಿರ ಹಣ ತೆಗೆಯುವ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊರ್ವ ಇನ್ನೊಂದು ಎಟಿಎಂ ಕಾರ್ಡ್ ನೀಡಿ ಅವರ ಪಿನ್ ನಂಬರನ್ನು ತಿಳಿದುಕೊಂಡು ಅಲ್ಲಿಂದ ಕುಮಟಾಗೆ ಹೋಗಿ ಖಾತೆಯ ಖಾತೆಯಿಂದ 37 ಸಾವಿರ ರೂಪಾಯಿ ತೆಗೆದು ಮೋಸ ಮಾಡಿದ ಬಗ್ಗೆ ತಿಳಿಸಿದ್ದರು.
ಒಂದೇ ಮಾದರಿಯ ಪ್ರಕರಣ ಆಗಿದ್ದರಿಂದ ಅಂಕೋಲಾ ಪೊಲೀಸ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಎಸ್ಪಿ ಎಮ್. ನಾರಾಯಣ, ಆಡಿಷನಲ್ ಎಸ್ಪಿ ಜಗದೀಶ್, ಡಿ ವೈಎಸ್ಪಿ ಗಿರೀಶ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸ್ ಐ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೇಪ್ಪನವರ ಮತ್ತು ಸಿಬ್ಬಂದಿಗಳಾದ ಮಹಾದೇವ ಸಿದ್ದಿ ಅಂಬರೀಶ್ ನಾಯ್ಕ ಆಸೀಪ್ ಆರ್,ಕೆ, ಮನೋಜ ಡಿ, ಶ್ರೀಕಾಂತ ಕಟಬರ ರಯೀಸ ಬಾಗವಾನ ಹಾಗೂ ಉತ್ತರ ಕನ್ನಡ ಜಿಲ್ಲಾ ಸಿಡಿಆರ್ ಸೆಲ್ನ ಸಿಬ್ಬಂದಿಯಾದ ಉದಯ ಗುನಗಾ ಇವರುಗಳ ತಂಡ ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು.