ಕಾರವಾರ:
ಗೋಕರ್ಣದ ಕೆಲವು ಹೋಂ ಸ್ಟೇ ದಲ್ಲಿ ತಂಗಿರುವ ವಿದೇಶಿಗರ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿದ ಕಾರಣ ಪೊಲೀಸ್ ಅಧಿಕಾರಿಗಳು ಹೋಂ ಸ್ಟೇ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣದ ಭೀಮಕೊಂಡದ ವೈಲ್ಡ್ ವಿಲೇಜ್ ಸ್ಟೇ (Wild Village Stay) ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ ವೈಲ್ಡ್ ವಿಲೇಜ್ ಸ್ಟೇ ನಲ್ಲಿ ಅರ್ಜೆಂಟೈನಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಈತನ ತಾಯಿ ಕಳೆದ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.
ಈ ಬಗ್ಗೆ ಹೋಂ ಸ್ಟೇ ನ ಮಾಲಿಕರು, ವಿದೇಶಿ ಪ್ರಜೆಗಳು ತಂಗಿದ ಬಗ್ಗೆ ‘ಸಿ’ ಫಾರ್ಮ ಭರ್ತಿ ಮಾಡಿ ಮಾಹಿತಿಯನ್ನು ಪೋಲಿಸ್ ಠಾಣೆಗೆ ಸಲ್ಲಿಸಬೇಕಾಗಿತ್ತು. ಆದರೆ ಇದನ್ನು ಪಾಲಿಸದೇ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಈ ನಿಯಮ ಮೀರಿ ವಿದೇಶಿ ಪ್ರಜೆಗಳಿಗೆ ತಂಗಲು ಅವಕಾಶ ನೀಡಿದ ಕುರಿತು ಗೋಕರ್ಣ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
