
ಕಾರವಾರ :
ಇಲ್ಲಿನ ಅರಗಾದ ಕದಂಬ ನೌಕಾನೆಲೆಯ ಮೇನ್ ಗೇಟ್ ಬಳಿ ಗ್ಯಾಸ್ ಟ್ಯಾಂಕರ್, ಬೈಕ್ ಹಾಗೂ ಜೆಸಿಬಿ ನಡುವೆ ಅಪಘಾತ ರಸ್ತೆ ಅಪಘಾತ ಸಂಭವಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಅಂಕೋಲಾ ಕಡೆಯಿಂದ ಕಾರವಾರದತ್ತ ಚಲಿಸುತ್ತಿದ್ದ ಎಚ್ಪಿ ಕಂಪನಿಯ ಗ್ಯಾಸ್ ಟ್ಯಾಂಕರ್, ಕಾರವಾರದಿಂದ ಅಂಕೋಲಾದತ್ತ ತೆರಳುತ್ತಿದ್ದ ಜೆಸಿಬಿ ಹಾಗೂ ನೆವಲ್ ದಿಂದ ಹೆದ್ದಾರಿ ಕಡೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದಿಂದಾಗಿ ಅರ್ಧ ಗಂಟೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಕಾರವಾರ ಪೊಲೀಸರು ಆಗಮಿಸಿದ್ದು ಸಂಚಾರ ಸುಗಮಗೊಳಿಸಿದ್ದಾರೆ.