
ದಾಂಡೇಲಿ :
ನವೆಂಬರ ೨೩ ರಂದು ದಾಂಡೇಲಿಯ ಹಾರ್ನ್ ಬಿಲ್ ಭವನದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗಿನ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ತಾಲೂಕಿನ ಹಿರಿಯ ಸಾಹಿತಿಗಳು ಗಣ್ಯರು ಚಿಂತಕರಿಂದ ಸಮಾವೇಶಕ್ಕೆ ಬೆಂಬಲ ಮತ್ತು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಿದರು.
ಕಾರವಾರದಿಂದ ಕಸಾಪ ತಾಲೂಕು ಅಧ್ಯಕ್ಷರು ಹೋರಾಟಗಾರಾದ ರಾಮಾ ನಾಯ್ಕ ಅವರು ಸಮಾವೇಶವನ್ನು ಬೆಂಬಲಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಅಂಕೋಲೆಯ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಜನಪರ ಚಿಂತಕರಾದ ರಮಾನಂದ ನಾಯಕ ಅವರು ಅಭಿವೃದ್ಧಿ ಸಮಾವೇಶಕ್ಕೆ ಬೆಂಬಲಿಸಿ ಶುಭಕೋರಿದ್ದಾರೆ.
ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಜಿಲ್ಲೆಯ ಅಭಿವೃದ್ಧಿಗೆ ಶಿಕ್ಷಣ ಸಾಹಿತ್ಯ ಮತ್ತು ರೈತರ ಭೂಮಿ ಪ್ರಶ್ನೆ ಬಗೆಹರಿಸಬೇಕು. ದೇಶಕ್ಕೆ ಸ್ವಾತಂತ್ರ್ಯದೊರೆತು ಅಮೃತ ಮಹೋತ್ಸವ ಕಳೆದರು ಉತ್ತರ ಕನ್ನಡ ಜಿಲ್ಲೆಯ ಸಾಮಾನ್ಯ ಜನರಿಗೆ ಇನ್ನು ಸರಿಯಾಗಿ ಮೂಲಭೂತ ಸೌಕರ್ಯಗಳು ದೊರೆಯದೆಯಿರುವುದು ಬೆಸರದ ಸಂಗತಿ,ಶಿಕ್ಷಣದ ಪ್ರಗತಿ ಅಭಿವೃದ್ಧಿಗೆ ಮೂಲ ಕಾರಣ ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಆದ ಕಾರಣ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ .ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಸಾಹಿತ್ಯ ಭವನದ ಅವಶ್ಯಕತೆಯಿದೆ. ಮುಖ್ಯವಾಗಿ ಶಿಕ್ಷಣದ ಸಮಸ್ಯೆಯನ್ನು ಬಗೆಹರಿಸಬೇಕು.ಇಂತಹ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮುಂದೆ ಚರ್ಚಿಸುವದಕ್ಕೆ ನಾವು ನಿವು ಸಮಾವೇಶ ಉತ್ತಮ ವೇದಿಕೆಯಾಗಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಜಿಲ್ಲೆಯ ಎಲ್ಲಾ ಜನರು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಯಾಗಿಸಬೇಕೆಂದು ವಿನಂತಿಸಿದರು.