
ಕಾರವಾರ:
ಹೆದ್ದಾರಿಯಲ್ಲಿ ಬಂದ ಜಾನುವಾರು ತಪ್ಪಿಸಲು ಹೋಗಿ ಕಾರೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಹೊನ್ನಾವರ ಮೂಲದ ಹರೀಶ ನಾಯ್ಕ (25) ಮೃತ ವ್ಯಕ್ತಿ.
ಕಾರಿನಲ್ಲಿದ್ದ ಇನ್ನೋರ್ವ ದಿನೇಶ ಎಂಬಾತ ಗಾಯಗೊಂಡಿದ್ದಾರೆ. ಹೊನ್ನಾವರದಿಂದ ಅಂಕೋಲಾಕ್ಕೆ ತೆರಳುತ್ತಿದ್ದ ವೇಳೆ ಘಟನೆನಡೆದಿದೆ. ಈ ವೇಳೆ ಹರೀಶ್ ಚಾಲನೆ ಮಾಡುತ್ತಿದ್ದರು. ಕೋಡಕಣಿ ಕ್ರಾಸ್ ಬಳಿ ಜಾನುವಾರೊಂದು ಎದುರಿಗೆ ಬಂದಾಗ ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ. ಪರಿಣಾಮ ಚಾಲಕ ಕಾರಿನಿಂದ ಕೆಳಕ್ಕೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡಾತನಿಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.