
ಕಾರವಾರ :
ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳನನ್ನು ಕಾರವಾರ ನಗರ ಠಾಣೆಯ ಪೊಲೀಸರು ಪಂಜಾಬ್ ರಾಜ್ಯದ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ರಾಜ್ಯದ ಜಲಂದರ್ ಮೂಲದ ಸಮೀರ ಸತ್ಪಾಲ ಶರ್ಮಾ ಬಂದಿತ ಆರೋಪಿ. ನಗರದ ಆಶ್ರಮ ರಸ್ತೆಯಲ್ಲಿನ ಅಭಿಮಾನಶ್ರೀ ಅಪಾರ್ಟಮೆಂಟನ ಪ್ಲಾಟ್ನಲ್ಲಿ ಹಗಲು ಕಳ್ಳತನವಾದ ಬಗ್ಗೆ ಪ್ಲಾಟಿನ ಮಾಲಕಿ ಪ್ರೀಯಾ ಅಂತೋನಿ ಪರ್ನಾಂಡೀಸ್ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರರಣವನ್ನು ಬೆನ್ನಟ್ಟಿದ ಪೊಲೀಸ್ ಅಧಿಕಾರಿಗಳು ನ. 11 ರಂದು ಪಂಜಾಬ ರಾಜ್ಯದ ಅಮೃತಸರ ಗೋಲ್ಡನ ಟೆಂಪಲ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತನಿಂದ ಕಳ್ಳತನ ಮಾಡಿದ್ದ 34.026 ಗ್ರಾಂ. ಚಿನ್ನ ಹಾಗೂ ಮೂರು ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ.
ಆರೋಪಿಯು ಅಂತರ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಇತನ ಮೇಲೆ ಬೆಂಗಳೂರು ನಗರದ 11 ಪೊಲೀಸ ಠಾಣೆಗಳಲ್ಲಿ 106 ಪ್ರಕರಣಗಳು. ಗೋವಾ ರಾಜ್ಯದ 3 ಪೊಲೀಸ ಠಾಣೆಗಳಲ್ಲಿ 7 ಪ್ರಕರಣಗಳು, ಉತ್ತರ ಪ್ರದೇಶದ ನೋಯ್ದಾ ನಗರದ 4 ಪೊಲೀಸ ಠಾಣೆಗಳಲ್ಲಿ 11 ಪಂಜಾಬ ರಾಜ್ಯದ ಎರಡು ಪೊಲೀಸ ಠಾಣೆಗಳಲ್ಲಿ 4 ಪ್ರಕರಣ ಸೇರಿದಂತೆ ಒಟ್ಟೂ 128 ಪ್ರಕರಣಗಳು ದಾಖಲಾಗಿವೆ. ತಲೆ ಮರೆಸಿಕೊಂಡು ನ್ಯಾಯಲಯಗಳಿಗೆ ಹಾಜರಾಗದೇ ತಿರುಗಾಡುತ್ತಿದ್ದ ಈತನ ಮೇಲೆ ಹಲವು ನ್ಯಾಯಲಯಗಳಲ್ಲಿ ಒಟ್ಟು 34 ಪ್ರಕರಣಗಳಲ್ಲಿ ಪ್ರೋಕ್ಷೇಮೇಶನ್ ವಾರಂಟ್ ಮತ್ತು 37 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ಗಳು ಮತ್ತು ಕೆಲವು ಪ್ರಕರಣಗಳು ವಿಚಾರಣೆಯಲ್ಲಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.