
ಜೋಯಿಡಾ –
ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಈಚರ್ ಪ್ರೋ ಲಾರಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ಇಂದು ಬೆಳಿಗಿನ ಜಾವ ನಡೆದಿದೆ.
ಅನಮೋಡ್ ತನಿಖಾ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬಂದಂತಹ ಖಚಿತ ಮಾಹಿತುಯ ಮೇರೆಗೆ, ಈಚರ್ ಪ್ರೋ ಲಾರಿ ನೊಂದಣಿ ಸಂಖ್ಯೆ ಎಮ್.ಎಚ್-40—G-5878 ತಪಾಸಣೆ ಮಾಡಿದಾಗ ,ಅದರ ಕ್ಯಾಬಿನ್ ಹಿಂಭಾಗದಲ್ಲಿ ಅಕ್ರಮವಾಗಿ ಕಂಪಾರ್ಟಮೆಂಟ್ ನಿರ್ಮಾಣ ಮಾಡಿ 7 ರಟ್ಟಿನ ಪೆಟ್ಟಿಗೆಗಳ ಪೈಕಿ 4 ರಟ್ಟಿನ ಪೆಟ್ಟಿಗೆಗಳಲ್ಲಿ ಪ್ರತಿಯೊಂದರಲ್ಲಿ 750 ಎಂಎಲ್ ನ 12 ರಂತೆ Golden ace whisky ಯ 48 ಬಾಟ್ಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750ಎಮ್.ಎಲ್. ನ Bombay whisky 12 ಬಾಟಲಿಗಳು, ಒಂದು ರಟ್ಟಿನ ಪೆಟ್ಟಿಗೆಯಲ್ಲಿ 750 ಎಂ.ಎಲ್ .ನ Mc. Dowels whisky ಯ12 ಕ ಬಾಟಲಿಗಳು ಹಾಗೂ ಒಂದು ರಟ್ಟಿನ ಪೆಟ್ಟಿಗೆಯಲ್ಲಿ 180 ml ನ Golden Ace ವಿಸ್ಕಿಯ 24 ಬಾಟಲಿಗಳು ,180 ml ನ O- choice ವಿಸ್ಕಿಯ 24 ಬಾಟಲಿ ಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ವಾಹನ ಹಾಗೂ ಮದ್ಯದ ಬಾಟಲಿಗಳ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ,ಪತ್ತೆ ಹಚ್ಚಿ ವಾಹನ ಹಾಗೂ ಮಧ್ಯದ ಬಾಟಲಿಗಳನ್ನು ಜಪ್ತುಪಡಿಸಿ, ಆರೋಪಿಯಾದ ಮಹಾರಾಷ್ಟ್ರದ ಅಹ್ಮದಪುರ ಜಿಲ್ಲೆಯ ಲಾತೂರಿನ ನಿವಾಸಿ ಬಾಲಾಜಿ ಗೋವಿಂದ. ಚವ್ಹಾಣ ಇತನ ಮೇಲೆ ಪ್ರಕರಣ ದಾಖಲಿಸಲಾಗಿದೆ.ಜಪ್ತುಪಡಿಸಿದ ವಾಹನದ ಅಂದಾಜು ಬೆಲೆ ರೂ.15 ಲಕ್ಷ ಗಳಾಗಿದ್ದು, ಮದ್ಯದ ಅಂದಾಜು ಬೆಲೆ ರೂ.32,500/-ಗಳಾಗಿರುತ್ತವೆ. ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಮತ್ತು ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ, ರವರ ಮಾರ್ಗದರ್ಶನ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಸೂಚನೆಯ ಮೇರೆಗೆ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಸಿಪಿಐ ಟಿ.ಬಿ.ಮಲ್ಲಣ್ಣನವರ ,ಸಿಬ್ಬಂದಿಗಳಾದ ಎಸ್ ಬನಸೋಡಿ, ಸಂತೋಷ ಸುಬ್ಬಣ್ಣನವರ್,ಸದಾಶಿವ ರಾಥೋಡಪ್ರವೀಣ ಬರಗಾಲಿ,ಎಸ ಬಿ ಬನಸೊಡೆ ಈರಣ್ಣ ಕಾರ್ಯಾಚರಣೆಯಲ್ಲಿದ್ದರು.