
ದಾಂಡೇಲಿ:
ಶಿರಶಿ ಸ್ಕೊಡ್ ವೆಸ್ ಸಂಸ್ಥೆ ಶಿರಸಿ ಹಾಗೂ ಗುಜರಾತ ದೇಸಾಯಿ ಫೌಂಡೇಶನ್ ಟ್ರಸ್ಟ್ ಸಂಯೋಗದೊಂದಿಗೆ ದಾಂಡೇಲಿ ನಗರದ ಸೆಂಟ್ ಮೈಕೆಲ್ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ಮಕ್ಕಳ ಆರೋಗ್ಯ ಮೇಳ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸ್ಕೊಡ್ ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕಾದ ಹೇಮಲತಾ ಚೌಗಲ ಹಾಗೂ ನಗರ ಸಭೆ ಅಧ್ಯಕ್ಷ ಅಶ್ಫಾಕ್ ಶೇಖ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಳಿಯಾಳದ ದೈಹಿಕ ಪರೀ ವೀಕ್ಷಕ ಜ್ಯೋತಿಪ್ರಭ ದೇಸಾಯಿ ಫೌಂಡೇಶನ್ ಟ್ರಸ್ಟ್ ಡೋನಾ,ಸೆಂಟ್ ಮೈಕಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸೆಲ್ವಿ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮವನ್ನು ಉಮೇಶ್ ಮರಾಠಿ ನಿರೂಪಿಸಿದರು. ಮಹಿಳಾ ಸಾಂತ್ವನ ಕೇಂದ್ರ ಕಾರ್ಯಕರ್ತೆ ಬಸಂತಮ್ಮ ನಾಯಕ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಭಾರತಿ ನಾಯಕ, ಪೂಜಾ ಬಾಲೇಶಗೋಳ, ಸುಧಾ ನಟೇಶ ಕಾರ್ಯಕ್ರಮಕ್ಕೆ ಸಹಕರಿಸಿದರು.