
ಗೋಕರ್ಣ:
ಗೋಕರ್ಣದ ಮಿಡ್ಲ ಬೀಚಿನಲ್ಲಿ ಗುರುವಾರ ಈಜಾಡಲು ತೆರಳಿದ ಬೆಂಗಳೂರು ಮೂಲದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ರವಿ (30) ಪ್ರತೀಕ್ ಪಿ (33) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಒಟ್ಟು 15 ಜನರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಗುರುವಾರ ಸಂಜೆ ಎಲ್ಲರೂ ಇಲ್ಲಿನ ಮಿಡ್ಲ ಬೀಚಿಗೆ ಈಜಲು ತೆರಳಿದ್ದರು. ಇಬ್ಬರು ಸಮುದ್ರ ಸುಳಿಗೆ ಸಿಲುಕಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದವರನ್ನ ದಡಕ್ಕೆ ತಂದಿದ್ದಾರೆ. ಬಳಿಕ ಗೋಕರ್ಣ ಪ್ರಾಥಮಿಕ ಕೇಂದ್ರಕ್ಕೆ ರವಾನಿಸುದ್ದರು. ಆದರೆ ಅಷ್ಟರಲ್ಲಿ ಪ್ರವಾಸಿಗರ ಪ್ರಾಣಪಕ್ಷಿ ಹಾರಿದೆ.
ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.