
ಶಿರಸಿ:
ಶಿರಸಿಯಲ್ಲಿ ಶನಿವಾರ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಅವರು ಅಧೀಕೃತವಾಗಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.
ಅವರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿಯ ಶಾಲು ಹೊದಿಸುವ ಮೂಲಕ ಹಾಗೂ ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಮಾತನಾಡಿದ ಅವರು ಇವತ್ತು ಕೇವಲ ದೇಶಕಷ್ಟೇ ಅಲ್ಲಾ ಇಡೀ ಜಗತ್ತಿಗೆ ಮೋದಿಯವರು ಬೇಕಾಗಿದ್ದಾರೆ. ಮೋದಿಗಿರುವ ತಾಕತ್ತು ಬಿಜೆಪಿ ಬಿಟ್ಟರೇ ಬೇರೆ ಯಾವ ಪಕ್ಷದ ನಾಯಕರಿಗೂ ಇಲ್ಲ ಎಂದರು.