
ದಾಂಡೇಲಿ :
ನಗರದ ನಿರ್ಮಲ ನಗರದಲ್ಲಿ ನಗರಸಭೆಯ ವಿಶೇಷ ಅನುದಾನದಡಿಯಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಗುರುವಾರ ಚಾಲನೆಯನ್ನು ನೀಡಲಾಯಿತು.
ವಾರ್ಡ್ ನಂ: 04 ರಲ್ಲಿ ಬರುವ ನಿರ್ಮಲ ನಗರದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಸಂಜಯ ನಂದ್ಯಾಳ್ಕರ ಅವರು ವಿಶೇಷ ಮುತುವರ್ಜಿಯನ್ನು ವಹಿಸಿ ನಗರಸಭೆಯ ವಿಶೇಷ ಅನುದಾನದಡಿ ಕೊಳವೆಬಾವಿ ನಿರ್ಮಾಣಕ್ಕೆ ಇಂದು ಚಾಲನೆಯನ್ನು ನೀಡಿದರು.
60 ಅಡಿ ಆಳದಲ್ಲೇ ನೀರು ಸಧ್ಯಕ್ಕೆ ದೊರೆತಿದ್ದು, ಅಂದಾಜು 200 ಅಡಿ ಆಳದವರೆಗೆ ತೋಡಲಾಗುವುದೆಂದು ನಗರಸಭೆಯ ಸದಸ್ಯರಾದ ಸಂಜಯ ನಂದ್ಯಾಳಕರ ಅವರು ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು. ಕೊಳವೆಬಾವಿ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.