
ಕಾರವಾರ:
ಜಿಲ್ಲೆಯ ಪಶ್ಚಿಮ ಘಟ್ಟ ಭಾಗದ ಶಿರಸಿ, ಯಲ್ಲಾಪುರ, ಸಿದ್ದಾಪುರ, ಕುಮಟಾ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವಕುರಿತು ಸಾರ್ವಜನಿಕರು ತಿಳಿಸಿದ್ದರು.
ಈ ವಿಷಯ ಮಾಧ್ಯಮಗಳಲ್ಲೂ ಪ್ರಕಟವಾಗುತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಈ ಕುರಿತು ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣ ಕೇಂದ್ರ ದಲ್ಲಿ ಮಾಹಿತಿ ಕಲೆಹಾಕಿದಾಗ ಯಾವುದೇ ತರದ ಭೂಕಂಪನವಾದ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ನಾವು ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ ಯಾವುದೇ ರೀತಿಯ ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ, ಹೀಗಾಗಿ ಜನ ಭಯಪಡುವ ಅವಷ್ಯಕತೆ ಇಲ್ಲ. ಇನ್ನು ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಪೋಟ ನಡೆಸಿಲ್ಲ. ಜನ ಕಳುಹಿಸಿದ ಆಡಿಯಾ ಕಳುಹಿಸಿ ಚಕ್ ಮಾಡಿದ್ದೇವೆ, ಭೂ ಕಂಪನವಾದಾಗ ರಿಕ್ಟರ್ ಮಾಪನದಲ್ಲಿ ರೆಕಾರ್ಡ ಆಗಬೇಕು,ಯಾವುದೂ ರೆಕಾರ್ಡ ಆಗಿಲ್ಲ ಜನರು ಹೇಳಿರುವ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.