
ಕಾರವಾರ :
ಹಳಿಯಾಳದಲ್ಲಿ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ವಾತಾವರಣ ಕಲುಶಿತಗೊಳ್ಳುತ್ತಿದ್ದು ಈ ಬಗ್ಗೆ ಕಾರ್ಖಾನೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಹರಿಜನ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು,
ಕಾರ್ಖಾನೆಯಿಂದ ದಟ್ಟ ಹೊಗೆ ಹೊರ ಬರುತ್ತಿದೆ. ಅಲ್ಲದೇ ಧೂಳು, ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದೆ. ದಿನೇ ದಿನೇ ಆರೋಗ್ಯ ಹದಗೆಡುತ್ತಿದೆ. ಕಾರ್ಖಾನೆಯಸಿ ಎಸ್ ಆರ್ ನಿಧಿ ಇದ್ದರು, ಸಾರ್ವಜನಿಕರ ಆರೋಗ್ಯದ ಬಗ್ಗೆ ಆಗಲಿ ಅಥವಾ ಅಭಿವೃದ್ಧಿಗಾಗಲಿ ಉಪಯೋಗಿಸುತ್ತಿಲ್ಲ ಎಂದರು.
ಕಾರ್ಖಾನೆಯಿಂದ ಆಗುತ್ತಿರುವ ಹಾನಿಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರುತ್ತೇವೆ. ಬಳಿಕವೂ ಎಚ್ಚೆತ್ತುಕೊಳ್ಳದಿದ್ದರೆ ಕಾರ್ಖಾನೆಗೆ ಮುತ್ತಿಗೆ ಹಾಕಿತ್ತೇವೆ ಎಂದು ಎಚ್ಚರಿಸಿದ್ದಾರೆ.