ಕಾರವಾರ:
ಕಾರವಾರ ತಾಲೂಕು ಹೋಟೆಗಾಳಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಟನ್ ಗಟಗಟಲೆ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಒಂದೇ ಕಡೆ ದಾಸ್ತಾನಾಗಿದ್ದ 180 ಮೆಟನ್ ಅಕ್ರಮ ಮರಳನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಯಾರ ಮಾಲಿಕತ್ವದಲ್ಲಿ ಇತ್ತು ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಇನ್ನೇನು ಮಾಹಿತಿ ಹೊರಬರಬೇಕಿದೆ.
