
ಕಾರವಾರ :
ಇಲ್ಲಿನ ಶಂಕರಮಠ ರಸ್ತೆಯ ಮನೋಹರ ಅಪಾರ್ಟಮೆಂಟ ನಾಲ್ಕನೇ ಮಹಡಿಯಿಂದ ವೃದ್ದನೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕೃಷ್ಣಾನಂದ ಶಿವರಾಮ ಪಾವಸ್ಕರ (76) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಂಕರಮಠ ರಸ್ತೆಯ ಸಮೀಪ ಇರುವ ಮನೋಹರ್ ಅಪಾರ್ಟಮೆಂಟ್ ಸಾವನ್ನಪ್ಪಿದ್ದಾರೆ.
ಮೃತರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಪ್ರತ್ಯೇಕವಾಗಿದ್ದಾರೆ. ಕಿರಿಯ ಮಗ ವಿನಯ್ ಜೊತೆ ತಂದೆ ತಾಯಿ ಶ್ರೀಹರಿ ಹೆಸರಿನ ಮನೆಯಲ್ಲಿ ವಾಸವಾಗಿದ್ದರು. ಮನೆಯಿಂದ 50 ಮೀಟರ್ ದೂರದಲ್ಲಿರುವ ಅಪಾರ್ಟೆಂಟ್ ಗೆ ನಡೆದು ಹೋದ ಕೃಷ್ಣಾನಂದ ಪಾವಸ್ಕರ ಲಿಫ್ಟ್ ಮೇಲೆ ತೆರಳಿ ಬಳಿಕ ಎರಡು ಚೇರ್ ಇಟ್ಟು ಅದರ ಮೇಲೆ ಹತ್ತಿ ಕೆಳಕ್ಕೆ ಜಿಗಿದಿದ್ದಾರೆ.
ವಿಷಯ ಗೊತ್ತಾಗಿ ಅವರ ಇಬ್ಬರ ಮಕ್ಕಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಪ್ಪನ ಮೃತ ದೇಹದ ಮುಂದೆ ಮಕ್ಕಳಿಬ್ಬರು ಜಗಳ ಆಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಎಂದು ಹಿರಿಯ ಮಗ ಸಂಜಯ ಮತ್ತು ರಾಜೇಶ್ ಪಾವಸ್ಕರ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕೆಂದು ಕೂಗಾಡಿದರು.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.