ದಾಂಡೇಲಿ:
ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಂಭಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ಆರೋಪಿಗೆ ಕಾರವಾರದ ನ್ಯಾಯಾಲಯವು 20 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ
ನಗರ ಠಾಣೆಯ ವ್ಯಾಪ್ತಿಯಲ್ಲಿ ಮಾರ್ಚ್ 05, 2021 ರಂದು ಫೂಕ್ಸೋ ಪ್ರಕರಣ ಸಂಬಂದಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ
ಪ್ರಕರಣ ದಾಖಲಿಸಿಕೊಂಡು ಅಂದಿನ ದಾಂಡೇಲಿಯ ಪಿ.ಎಸ್.ಐ ಮಹಾದೇವಿ ಜಿ. ನಾಯ್ಕೋಡಿ ಮತ್ತು ಸಿಪಿಐ ಪ್ರಭು ಗಂಗನಹಳ್ಳಿ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿ ಬಾನವೆಂಚರ್ ಡುಮಿಂಗ್ ಫರ್ನಾಡಿಸ್ ಈತನ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ ಕಾರವಾರದ ನ್ಯಾಯಾಲಯಕ್ಕೆ ಸಲ್ಲಿಸಿದ್ದರು
ವಿಶೇಷ ಸರಕಾರಿ ಅಭಿಯೋಜಕರಾದ ಶುಭ ಗಾಂವಕರ ಪ್ರಕರಣದ ವಿಚಾರಣೆ ನಡೆಸಿ, ಪ್ರಧಾನ ಸರ್ಕಾರಿ ಅಭಿಯೋಜಕರಾದ ತನುಜಾ ಹೊಸಪಟ್ಟಣ ಸಂತ್ರಸ್ತೆ ಪರ ವಾದವನ್ನು ಮಂಡಿಸಿ 6 ನವೆಂಬರ್ 2024 ರಂದು ನ್ಯಾಯಾಲಯವು ಬಾನ ವೆಂಚರ್ ಫರ್ನಾಂಡಿಸ್ ಈತನಿಗೆ ಪೋಕ್ಸೂ ಕಾಯ್ದೆ ಅಡಿಯಲ್ಲಿ 20 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡವನ್ನು ವಿಧಿ ಆದೇಶಿಸಿ ತೀರ್ಪು ನೀಡಿದೆ.
ಈ ಪ್ರಕರಣವನ್ನು ದಾಂಡೇಲಿ ನಗರ ಠಾಣೆಯ ಪಿಎಸ್ಐ ಮಹಾದೇವಿ ನಾಯ್ಕೋಡಿ, ಸಿ.ಪಿ.ಐ ಪ್ರಭು ಗಂಗನಹಳ್ಳಿ ದೋಷಾರೋಪಣ ಪತ್ರ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕಾರವಾರದ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಶುಭಾ ಗಾಂವಕರ ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರಧಾನ ಸರ್ಕಾರಿ ಅಭಿಯೋಜಕರಾದ ತನುಜಾ.ಬಿ.ಹೊಸಪಟ್ಟಣ ಸಂತ್ರಸ್ತ ಬಾಲಕಿಯ ಪರ ವಾದವನ್ನು ಮಂಡಿಸಿದ್ದರು. ಇನ್ನೂ17 ಜನ ಸಾಕ್ಷಿದಾರ ವಿಚಾರಣೆ ನಡೆಸಲಾಗಿತ್ತು. ತನಿಖಾ ಸಹಾಯಕರಾಗಿ ಮಂಜುನಾಥ ಶೆಟ್ಟಿ ಕಾರ್ಯ ನಿರ್ವಹಿಸಿದ್ದರು