
ದಾಂಡೇಲಿ:
ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನಾ ಹಲವು ಬಾರಿ ಯೋಚನೆ ಮಾಡಿ ಸೈಬರ್ ಖದೀಮ ಕೈಗೆ ನೀವೇ ಸುಲಭವಾಗಿ ಬಲಿಯಾಗುತ್ತೀರಿ ಇದರ ಬಗ್ಗೆ ಜಾಗೃತಿ ಇರಲಿ ಎಂದು ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ, ದಾಂಡೇಲಿ ನಗರಠಾಣೆ ಹಾಗೂ ಹಳೇ ದಾಂಡೇಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹದಿನೆಂಟು ವರ್ಷ ವಯಸ್ಸಿನವರು ವಾಹನ ಚಲಾಯಿಸಿ ಅಪಘಾತ ಸಂಭವಿಸಿದರೆ ತಂದೆ ತಾಯಿಗಳು ದಂಡ ಕಟ್ಟುವ ಕಾನೂನಿದೆ. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ನೀವು ಪಾಲಿಸಿ, ಸಮಾಜಕ್ಕೂ ತಿಳಿಸಿ, ಸಮಾಜದಲ್ಲಿ. ಉಂಟಾಗುವ ಅಪರಾಧ ತಡೆಗಟ್ಟವಲ್ಲಿ ಯುವಕರ ಪಾತ್ರ ಅತಿ ಮುಖ್ಯವಾಗಿದೆ. ಎಲ್ಲರೂ ಕನಿಷ್ಠ ದಿನ ನಿತ್ಯದ ಬಳಕೆಯ ಕಾನೂನುಗಳ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಳ್ಳಿ ತುರ್ತು ಸಂದರ್ಭದಲ್ಲಿ ಅಪರಾಧ ಸಂಭವಿಸಿದರೆ ಇಲಾಖೆಯನ್ನು ಯುಕ್ತವಾಗಿ ಸಂಪರ್ಕಿಸಿ ಎಂದು ತಿಳಿ ಹೇಳಿದರು. ಪೋಲೀಸ ಸಿಬ್ಬಂದಿ ಮಂಗಳದಾಸ ನಾಯ್ಕ ಕಾರ್ಯಕ್ರಮಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ನಾಗರೇಖಾ ಗಾಂವಕರ, ಉಪನ್ಯಾಸಕಿಯರಾದ ಸುಮಂಗಲಾ ನಾಯ್ಕ, ವಿದ್ಯಾ ಉಪ್ಪಾರ, ಸಂಜನಾ,ಉಪನ್ಯಾಸ ಪ್ರವೀಣಕುಮಾರ ಸುಲಾಖೆ ಹಾಗೂ ಸಿಬ್ಬಂದಿ ಇದ್ದರು.