
ದಾಂಡೇಲಿ:
ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ’ ಎಂದು ನಗರ ಠಾಣೆಯ ಪಿ.ಎಸ.ಐ ಅಮೀನ ಅತ್ತಾರ ಹೇಳಿದರು.
ಅವರು ಇಂದು ಬೆಳಿಗ್ಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ “ಅಪರಾಧ ತಡೆ ಮಾಸಾಚರಣೆ” ಪ್ರಯುಕ್ತ ಸಂಚಾರ ನಿಯಮ ಉಲ್ಲಂಘಿಸಿದ 26 ದ್ವಿಚಕ್ರ ವಾಹನ ಸವಾರರಿಗೆ 13000 ರೂ/- ದಂಡ ವಿಧಿಸಿ ರಶೀದಿ ನೀಡಿ ಠಾಣೆಗೆ ಕರೆತಂದು ಸಂಚಾರ ನಿಯಮಗಳು, ಹೆಲ್ಮಟ್ ಪ್ರಾಮುಖ್ಯತೆ, ತ್ರಿಬಲ್ ರೈಡಿಂಗ್ ಅಪಾಯ ಮತ್ತು ವಾಹನದ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ವಾಹನ ಸವಾರರಿಗೆ ತಿಳಿಸಿದರು.ಕೇವಲ ಪೋಲಿಸರಿಂದ ಅಪರಾಧ ತಡೆ ಸಾಧ್ಯವಿಲ್ಲ ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಇ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.