ದಾಂಡೇಲಿ:
ಕಾಡಿನ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಗತ್ಯ ಸಾರ್ವಜನಿಕರು ಹಾಗೂ ಜನರ ಸಹಭಾಗಿತ್ವದೊಂದಿಗೆ ನಾವು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಮಾಡುತ್ತೇವೆ” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ. ಸಿ. ಕರೆ ನೀಡಿದರು.
ಇಂದು ಬೆಳಿಗ್ಗೆ ನಗರದ ಬಂಗೂರನಗರ ಡಿಗ್ರಿ ಕಾಲೇಜಿನ ಆವರಣದಲ್ಲಿ ದಾಂಡೇಲಿ ವಲಯದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 72 ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ವನ್ಯಜೀವಿ ಸಂರಕ್ಷಣೆಗೆ ಆವಾಸ ಸ್ಥಾನಗಳ ಸಂಪರ್ಕದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಬಂಗೂರನಗರ ಡಿಗ್ರಿ ಕಾಲೇಜಿನಿಂದ ಅರಣ್ಯ ಇಲಾಖೆಯ ಪ್ರವಾಸಿಮಂದಿರವರಗೆ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಹಾಗೂ ಮೆರವಣಿಗೆ ನಡಡಯಿತು.ಜಾಥಾದಲ್ಲಿ ವಿದ್ಯಾರ್ಥಿಗಳಿ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷ ವಾಕ್ಯ ಗಳನ್ನು ಕೂಗಿದರು.
ಸೋಮಾನಿ ವೃತ್ತದಲ್ಲಿ ಇಲಾಖೆವತಿಯಿಂದ ಕೀರು ಬಿದಿ ನಾಟಕ ನಡೆಯಿತು.ಸಪ್ತಾಹದಲ್ಲಿ ತಹಶಿಲ್ದಾರ ಶೈಲೇಶ ಪರಮಾನಂದ,ತಾಲೂಕ ಪಂಚಾಯತ ಕಾರ್ಯ ನಿರ್ವಾಹಣಾಧಿಕಾರಿ ಟಿ.ಸಿ ಹಾದಿಮನಿ,
ಬಂಗೂರ ನಗರ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಬಿ.ಎಲ. ಗೂಂಡುರ,ದಾಂಡೇಲಿ ವಲಯದ ಎಸಿಫ ಎಮ ಎಸ ಕಳ್ಳಿಮಠ,ಆರ ಎಫ ಒ ಗುರುಪ್ರಸಾದ ಕೆ, ಪರಿಸರ ಪ್ರೇಮಿ ರಾಹುಲ ಬಾವಾಜಿ,ಅರಣ್ಯ ಇಲಾಖೆಯ ಸಿಬ್ಬಂಧಿಗಳು,ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
