
ದಾಂಡೇಲಿ: ಭಾರತವು ಸರ್ವ ಜನಾಂಗದ ಶಾಂತಿಯ ತೋಟ ಪರಸ್ಪರ ಸೌಹಾರ್ದತೆಯಿಂದ ಭಾರತ ನಿರ್ಮಾಣದ ರೂವಾರಿಗಳು ನಾವಾಗಬೇಕು ಎಂದು ಮುಖ್ಯ ಅತಿಥಿಗಳಾಗಿ ಶಿಗ್ಗಾಂವಿಯ ಮಾಜಿ ಶಾಸಕ ಮತ್ತು ಹೆಸ್ಕಾಂ ಚೇರಮನ್ ಸೈಯದ್ ಅಜೀಂಪೀರ್ ಖಾದ್ರಿ ಹೇಳಿದರು.
ಅವರು ನಗರದ ಇಸ್ಲಾಂ ನೂರ್ ರಿಲಿಜೀಯಸ್ ಮತ್ತು ಎಜುಕೇಶನ್ ಟ್ರಸ್ಟ್ ಆಶ್ರಯದಡಿ ನಡೆದ ಮುಸ್ಲಿಂ ಧರ್ಮ ಬಾಂಧವರ ಫೈಝಾನೆ ಮದೀನಾ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಭಗವಂತ ಕರುಣಿಸಿದ ಸಂಪತ್ತನ್ನು ಸಂಕಷ್ಟದಲ್ಲಿದ್ದವರ ಕಣ್ಣೀರನೊರೆಸಲು ಸದ್ಬಳಕೆ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕ್ಫ್ ಬೋರ್ಡ್ ಚುನಾಯಿತ ಸದಸ್ಯ ಅನ್ವರ್ ಪಾಷಾ ಹಾಗು ರಾಜ್ಯ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಮೊಹಮದ್ ರಾಶಿದ ಹಾಗೂ ನಗರ ಸಭೆಯ ಅಧ್ಯಕ್ಷ ಅಷ್ಟಾಕ್ ಶೇಖ ವೇದಿಕೆಯಲ್ಲಿ ಇದ್ದರು.
ಸಮಾವೇಶದಲ್ಲಿ ಸಾಹಿತ್ಯ, ನಾಟಕ, ಕಲಾಕ್ಷೇತ್ರದಲ್ಲಿ ಸೇವೆಗೈದ ಸಾಧಕರಾದ ಉಸ್ತಾದ್ಕೆ. ಎಲ್. ಜಮಾದಾರ, ದುಂಡಪ್ಪ ಗೊಳೂರು, ಮುರ್ತುಜಾ ಹುಸೇನ್ ಆನೆಹೊಸೂರು,ಭೀಮಾಶಂಕರ
ಅಜನಾಳ, ನರೇಶ ನಾಯ್ಕ ಮತ್ತು ಪ್ರವೀಣಕುಮಾರ್ ಸುಲಾಖೆ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ, ಉತ್ತರ ಪ್ರದೇಶದ ಸಾಹೇಬ್ ಕೀಬ್ಲಾ ಸಂಸ್ಥೆಯ ಮುಖ್ಯಸ್ಥ ಗುಲಾಮ್ ರಬ್ಬಾನಿ ನಷ್ಟಾಮುಂತಾದವರಿದ್ದ ಬೆಂಗಳೂರು ಘಟಕದ ಸಾಹೇಬ್ ಕೀಬ್ಲಾ ಸಂಸ್ಥೆಯ ಅಧ್ಯಕ್ಷ ಮುಫ್ತಿ ನಾಸಿರ್ ರಜಾ ಖಾನ್ ಧಾರ್ಮಿಕ ಪ್ರವಚನವನ್ನು ನೀಡಿದರು.
ಈ ಸಂದರ್ಭದಲ್ಲಿ ನೂರ್ ಇಸ್ಲಾಂರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಇಕ್ವಾಲ್ ಶೇಖ,
ಪ್ರಮುಖರುಗಳಾದ ಗೌಸ್ ಖತೀಬ, ನವಾಜ್ ಕರೀಮ್ ಖಾನ, ರಾಜೇಸಾಬ ಸುಂಕದ, ಮಜೀದ ಸನದಿ, ಮೌಲಾಲಿ ಮುಲ್ಲಾ, ದಾದಾಪೀರ ನದೀಮುಲ್ಲಾ, ಮುಂತಾದವರಿದ್ದರು