
ದಾಂಡೇಲಿ: ಸಂವಿ ಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರರವರ ಕುರಿತು, ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರ ಅಮೀತ ಶಾ ರವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದ ಜನತೆಗೆ ಕ್ಷಮೆಯನ್ನು ಕೇಳಲು ಆಗ್ರಹಿಸಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ಮತ್ತು ಆದಿ ಜಾಂಬವಂತ ಸಂಘದ ವತಿಯಿಂದ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಲಾಯಿತು.
ಸಂವಿಧಾನ ಜಾರಿಯಾಗಿ 75 ವರ್ಷಗಳು ಘಟಿಸಿವೆ. ಸಂದರ್ಭದಲ್ಲಿ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಸದನಗಳಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಭೆಯಲ್ಲಿ ಕೇಂದ್ರದ ಗೃಹ ಸಚಿವರಾದ ಅಮಿತ ಶಾ ರವರು ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ, ಎನ್ನುವುದು ವ್ಯಸನವಾಗಿದೆ (ಫ್ಯಾಷನ್ ಆಗಿದೆ) ಅಂಬೇಡ್ಕರ ಬದಲಾಗಿ ದೇವರನ್ನು ನಾಮಸ್ಮರಣೆ ಮಾಡಿದ್ದರೆ ಎಳು ಜನ್ಮಕ್ಕೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿ ಅಂಬೇಡ್ಕರ ಅವರ ಕುರಿತು ತಮಗಿರುವ ಅಸಹನೆಯನ್ನು ಹೊರಹಾಕಿದ್ದಾರೆ. ಹಾಗೂ ತಾವು ಸಂವಿಧಾನ ವಿರೋಧಿಯು ಎಂಬುದನ್ನು ಸಾಭೀತುಗೊಳಿಸಿದ್ದಾರೆ. ಸಂವಿಧಾನ ಬಧ್ಧವಾಗಿ ಕೇಂದ್ರ ಸಚಿವರಾಗಿ ಸಂವಿಧಾನದ ಶಿಲ್ಪಿಯನ್ನು ಅವಮಾನಿಸುವ ಹೇಳಿಕೆಯನ್ನು ನೀಡುವುದು ದೇಶದ್ರೋಹವೇ ಸರಿ. ಇಂತಹ ವ್ಯಕ್ತಿ ಕೇಂದ್ರ ಸಚಿವರಾಗಲು ಅನರ್ಹರಾಗಿದ್ದು, ಈ ಕೂಡಲೇ ತಾವು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಹಾಗೂ ಪ್ರಾಯಶ್ಚಿತವಾಗಿ ಕೇಂದ್ರ ಗೃಹ ಸಚಿವರಾದ ಅಮಿತ ಶಾ ರವರು ದೇಶದ ಜನತೆಗೆ ಕ್ಷಮೆ ಕೋರಬೇಕೆಂದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷ ಹಾಗೂ ಆದಿ ಜಾಂಭವಂತ ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ನಡಿಗೇರ್, ಹಳಿಯಾಳ ತಾಲೂಕಾಧ್ಯಕ್ಷ ಎಚ್. ಗೋಪಾಲ್, ಜಿಲ್ಲಾಧ್ಯಕ್ಷ ಬಸವರಾಜ್ ಮೈತ್ರಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಕೇದಾರಿ, ಜೊಯಿಡಾ ತಾಲ್ಲೂಕಾಧ್ಯಕ್ಷ ದತ್ತು ಮಾಳಿಗೆ, ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀನಿತ್ಯ ಕಾಂಬಳೆ, ದಾಂಡೇಲಿ ಮಹಿಳಾಧ್ಯಕ್ಷೆ ಸರಸ್ವತಿ ಚವ್ಹಾನ, ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.