
ಬನವಾಸಿ:
ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಕಾಡುಗಳ್ಳ ಆರೋಪಿ ಶಿರಸಿ ರಾಜೀವ ನಗರದ ಜಾಕೀರ ಅಹಮ್ಮದ್ ಹಯಾದ್ ಸಾಬ್ ಬೆಣ್ಣೆ ಈತನನ್ನು ಬಂಧಿಸಿ ಮೂರು ಸಾಗವಾನಿ ತುಂಡು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಬನವಾಸಿ ವಲುದ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬನವಾಸಿ ವಲಯ ಅತಣ್ಯಾದಿಕಾರಿ ಶ್ರೀಮತಿ ಭವ್ಯ ನಾಯ್ಕ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಎಕ್ಕಂಬಿ ಉಪ ವಲಯ ಅರಣ್ಯಾದಿಕಾರಿ ರವೀಂದ್ರ ಕರ್ನಲ್,ದಾಸನಕೊಪ್ಪ ಶಾಖೆಯ ಉಪ ವಲಯ ಅರಣ್ಯಾದಿಕಾರಿ ಕಾರ್ತಿಕ ನಾರ್ವೇಕರ್,ಬನವಾಸಿ ಶಾಖೆಯ ಉಪ ವಲಯ ಅರಣ್ಯಾದಿಕಾರಿ ಮಂಜುನಾಥ ಗಂಗೆಮತ ಇತರರಿದ್ದರು.