
ಕಾರವಾರ:
ಜಿಲ್ಲೆಯ ವಿಭಜನೆಯ ಕುರಿತು ಹೋರಾಟ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಅವರು ಗೋವಾ ಮಂಚ್ ಹಾಗೂ ಎಂಇಎಸ್ ಸಂಘಟನೆಯ ಏಜೆಂಟ್ ಆಗಿರಬಹುದು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಹೇಳಿದ್ದಾರೆ.
ನಗರದದಲ್ಲಿ ಮಾತನಾಡಿದ ಅವರು, ಉದ್ಯಮಿಯಾಗಿರುವ ಅನಂತಮೂರ್ತಿ ಹೆಗಡೆ ಅವರು ಕದಂಬ ಜಿಲ್ಲಾ ಸಮಿತಿ ಮಾಡಿಕೊಂಡು ಜಿಲ್ಲೆಯ ವಿಭಜನೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಈರೆಗೆ ಯಾವುದೇ ಹೋರಾಟದಲ್ಲಿ ಕಾಣಿಸಿಕೊಳ್ಳದ ಅವರು ಅಣಬೆಯಂತೆ ಹುಟ್ಟಿಕೊಂಡು ಜಿಲ್ಲೆಯ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಗಡಿ ಭಾಗವನ್ನು ವಿಭಜನೆ ಮಾಡಲು ಹೊರಟಿರುವುದು ನಾಡದ್ರೋಹದ ಕೆಲಸ. ಹೀಗಾಗಿ ಅನಂತಮೂರ್ತಿ ಅವರು ಗೋವಾ ಮಂಚ್ ಹಾಗೂ ಎಂಇಎಸ್ ಅವರ ಏಜೆಂಟ್ ಇರಬಹುದೇ ಎಂದು ಸಂಶಯ ವ್ಯಕ್ತವಾಗುತ್ತಿದೆ.ಉದ್ಯಮಿ ಆಗಿರುವ ಅವರು ಜಿಲ್ಲೆ ವಿಭಜನೆಯಾದರೆ ಶಿರಸಿ ಭಾಗದಲ್ಲಿ ಕೃಷಿ ಭೂಮಿಯ ಬೆಲೆ ಹೆಚ್ಚಾಗುತ್ತದೆ ಎಂದು ಎದುರು ನೋಡಿತ್ತಿದ್ದಾರೆ ಎಂದಿದ್ದಾರೆ.