
ಕಾರವಾರ:
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ ಅವರು ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗೆ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಮದು ಜೀವ ರಕ್ಷಕ ಸಿಬ್ಬಂದಿಯು ಸೋಮವಾರ ಜಿಲ್ಲಾಧಿಕಾರಿ ಲಕ್ಷಿö್ಮಪ್ರಿಯಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೊನ್ನಾವರದ ಇಕೋ ಬೀಚ್ನಲ್ಲಿ ಭಾನುವಾರ ಜೀವ ರಕ್ಷಕ ಸಿಬ್ಬಂದಿಯು ಕರ್ತವ್ಯದಲ್ಲಿದ್ದರು. ಏಕಾಏಕಿ ಬಂದ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ ಅವರು ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂಧಿಸಿದ್ದಾರೆ. ಅಲ್ಲದೇ ಹಲ್ಲೆ ಕೂಡ ಮಾಡಿದ್ದಾರೆ. ಹೀಗಾಗಿ ಅವರ ವಿರಯದ್ಧ ಸೂಕ್ರ ಕ್ರಮ ಕೈಗೊಂಡು ಸಿಬ್ಬಂದಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.