ದಾಂಡೇಲಿ :
ನಗರದ ಮದ್ಯದ ಅಂಗಡಿಗಳಲ್ಲಿ ಹಾಗೂ ಬಾರ&ರೇಸ್ಟೊರೆಂಟಗಳಲ್ಲಿ ಮದ್ಯ ಪ್ರಿಯರಿಗೆ ತಮಗೆ ಬೇಕಾದ ಬ್ರ್ಯಾಂಡಿನ ಮದ್ಯ ಸಿಗುತ್ತಿಲ್ಲದಿರುವುದರಿಂದ ಮದ್ಯ ಪ್ರಿಯರು ಬೇಸರಗೊಂಡಿದ್ದಾರೆ.ಹೆಚ್ಚಾಗಿ ಮಾರಾಟವಾಗುವ ಬಡವೈಸರ್ ಹಾಗೂ ಕಾರ್ಲ್ಸಬರ್ಗನಂತಹ ಬಿಯರ್ ಗಳು ನಗರದ ಬಾರ&ರೇಸ್ಟೊರೆಂಟಗಳಲ್ಲಿ ಸಿಗದೆಯಿರುವುದು ಇಗ ಬಿಯರ್ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ .ಕೇವಲ ಕ್ನೊಕೌಟ,ಕಿಂಗ್ ಫಿಷರ್,ಬುಲೆಟ್ ಅಂತಹ ಬಿಯರ್ಗಳನ್ನು ಮಾತ್ರ ಮಾರಟ ಮಾಡುತ್ತಿದ್ದು ಬಿಯರ್ ಪ್ರಿಯರು ಅನಿವಾರ್ಯವಾಗಿ ಬಾರ&ರೇಸ್ಟೊರೆಂಟಗಳಲ್ಲಿ ಸಿಗುವ ಬಿಯರಿಂದ ಮಾತ್ರ ತಮ್ಮ ದಾಹ ನೀಗಿಸಿಕೊಳ್ಳುವಂತಾಗಿದೆ.
ಮಾರಾಟಗಾರರಿಗೆ ಕೇಳಿದರೆ ತಮಲ್ಲಿ ಇ ಬ್ರ್ಯಾಂಡಿನ ಬಿಯರ್ಗಳು ಜಾಸ್ತಿ ಮಾರಾಟವಾಗುವದಿಲ್ಲವೆಂದು ಹೇಳುತ್ತಾರೆ.ಮದ್ಯದ ಅಂಗಡಿಗಳು ತಮಗೆ ಯಾವ ಬ್ರ್ಯಾಂಡಿನ ಮೇಲೆ ಕಮಿಷನ್ ಹೆಚ್ಚಾಗಿ ಸಿಗುತ್ತದೆಯೊ ಅದನ್ನು ಮಾತ್ರ ಮಾರಾಟ ಮಾಡುತ್ತಾರೆ ಜನರಿಗೆ ಬೇಕಾದ ಮದ್ಯವನ್ನು ಮಾರಾಟ ಮಾಡುವದಿಲ್ಲವೆನ್ನುತ್ತಾರೆ ನಗರದ ಮದ್ಯ ಪ್ರಿಯರು. ಕೇಲವು ತಿಂಗಳ ಹಿಂದೆನೆ ಮದ್ಯದ ಅಂಗಡಿಗಳಲ್ಲಿ ಕಿಂಗ್ ಫಿಷರ್ ಬಿಯರನ್ನು ಮಾರಾಟ ಮಾಡದೆ ಕೇವಲ ಬಡವೈಸರ್ ಬಿಯರನ್ನು ಮಾತ್ರ ಮಾರಾಟ ಮಾಡುತ್ತಿದ್ದರು .ಇಗ ಮತ್ತೆ ಬಡವೈಸರ್ ಬಿಯರನ್ನು ನಿಲ್ಲಿಸಿ ಕಿಂಗ್ ಫಿಷರ್ ಬಿಯರನ್ನು ಮಾರಾಟ ಮಾಡುತ್ತಿದ್ದಾರೆ.ಇವರಿಗೆ ಅನುಗುಣವಾಗುವ ರಿತಿಯಲ್ಲಿ ಮದ್ಯದ ಅಂಗಡಿದಾರರು ಮದ್ಯ ಮಾರಾಟ ಮಾಡುತ್ತಿದ್ದಾರೆ.ತಮ್ಮ ಲಾಭಕ್ಕಾಗಿ ಗ್ರಾಹಕರ ಬೇಡಿಕೆಯ ಮದ್ಯವನ್ನು ಮಾರಾಟ ಮಾಡದೆಯಿರುವುದು ಸರಿಯೆ?
ಇದರಿಂದ ಬಿಯರ ಮಾರಾಟ ಪ್ರಮಾಣವು ಕಡಿಮೆಯಾಗುವುದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಕೂಡ ನಷ್ಟ.ದಾಂಡೇಲಿಗೆ ಹೊಸ ವರ್ಷದ ಆಚರಣೆಗೆ ಬಂದಿರುವ ಪ್ರವಾಸಿಗರು ಹೆಚ್ಚಾಗಿ ಬಡವೈಸರ್ ಹಾಗೂ ಕಾಲ್ರ್ಸಬರ್ಗನಂತಹ ಬ್ರ್ಯಾಂಡಿನ ಬಿಯರಗಳನ್ನು ಬಯಸುತ್ತಾರೆ ಆದರೆ ದಾಂಡೇಲಿಯ ಬಾರ & ರೇಸ್ಟೊರೆಂಟಗಳಲ್ಲಿ ಅವು ದೊರೆಯದೆಯಿರುವದರಿಂದ ಪ್ರಾವಾಸಿಗರು ಬೇಸರ ವ್ಯಕ್ತ ಪಡೆಸಿದ್ದಾರೆ.ಆದಷ್ಟು ಬೇಗ ಬಾರ&ರೇಸ್ಟೊರೆಂಟಗಳಲ್ಲಿ ಎಲ್ಲ ರಿತಿಯ ಬಿಯರ್ಗಳು ಮಾರಾಟ ಮಾಡಬೇಕೆಂದು ಮದ್ಯಪ್ರಿಯರ ಒತ್ತಾಯವಾಗಿದೆ.