
ದಾಂಡೇಲಿ: ತಾಲೂಕಿನ ಆಲೂರ ಗ್ರಾಮದಲ್ಲಿ ಫೆ.೨೮ ರಂದು ಆಯೋಜಿಸಿರುವ ೩ ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ.ವ್ಹಿ.ದೇಶಪಾಂಡೆಯವರು ಶುಕ್ರವಾರ ನಗರಸಭೆಯ ಸಭಾ ಭವನದಲ್ಲಿ ಬಿಡುಗಡೆ ಮಾಡಿದರು.
ಇ ವೇಳೆ ಮಾತನಾಡಿದ ಅವರು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎನ.ವಾಸರೆಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ ಈ ಬಾರಿಯ ಸಮ್ಮೇಳನ ಗ್ರಾಮಿಣ ಪ್ರದೇಶದಲ್ಲಿ ಆಯೋಜಿಸಿದ್ದು ಸಂತೋಷದ ಸಂಗತಿ.
ಕನ್ನಡ ನಮ್ಮ ತಾಯಿ ಭಾಷೆ ಸಾಹಿತ್ಯ ಜಾತ್ರೆ ಅತ್ಯಂತ ಸಡಗರದಿಂದ ನಡೆಯಬೇಕು ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರು ಸ್ವಯಂ ಪ್ಪ್ರೇರಣೆಯಿಂದ ಸಹಕರಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ. ವಾಸರೆ ಮಾತನಾಡಿ ಹಳಿಯಾಳ ,ದಾಂಡೇಲಿ ಹಾಗೂ ಉಳಿವಿಯಲ್ಲಿ ನಡೆದಿರುವ ಎಲ್ಲಾ ಸಾಹಿತ್ಯ ಸಮ್ಮೇಳನಕ್ಕೂ ಶಾಸಕರು ಸಹಕರಿಸಿದ್ಧಾರೆ ಅವರಿಗೆ ಕಸಾಪ ಬಳಗದಿಂದ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಕ್, ಉಪಾಧ್ಯಕ್ಷೆ ಶಿಲ್ಪಾಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನವಾಯಿ ,ಪೌರಾಯುಕ್ತ ವಿವೇಕ ಬನ್ನೆ ತಹಶೀಲ್ದಾರ್ ಶೈಲೇಶ್ ಪರಮಾನಂದ ನಗರಸಭೆ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸುರೇಶ್ ಕಾಮತ್ ಅವರುಸ ಸ್ವಾಗತಿಸಿದರು ಕಸಾಪ ತಾಲೂಕ ಅಧ್ಯಕ್ಷ ನಾರಾಯಣ ನಾಯ್ಜ ವಂದಿಸಿದರು.