
ಶಿರಸಿ:
ತಾಲೂಕಿನ ಮಹಾಭಲೇಶ್ವರ ಹೆಗಡೆ ಕುಪ್ಪಾಳಿಕೆ ಇವರ ಮನೆಯ ಬಳಿ ತಡ ರಾತ್ರಿ ಕರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.
ಬೇಟೆಯನ್ನು ಹುಡುಕಿ ಊರಿಗೆ ಬಂದ ಕರಿಚಿರತೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯ ಬಾಗಿಲ ವರೆಗೂ ಬಂದ ಚಿರತೆಯು ನಾಯಿ ಬೊಗಳಿದ ಶಬ್ದ ಕೇಳಿ ವಾಪಾಸ್ ಅರಣ್ಯದ ಕಡೆಗೆ ಓಡಿದೆ. ಸತತವಾಗಿ ಈ ರೀತಿ ಚಿರತೆಗಳು ಜನವಸತಿ ಪ್ರದೇಶಕ್ಕೆ ಬರುತ್ತಿರುವ ಕಾರಣ ಜನರಲ್ಲಿಯೂ ಭೀತಿ ಎದುರಾಗಿದೆ.