
ಅಂಕೋಲಾ:
ಎಲ್ಲಾರೊಂದಿಗೆ ಕಾರ್ಯ ಚಟುವಟಿಕೆಯಲ್ಲಿದ್ದ ಎನ್ಎಸ್ಎಸ್ ಕ್ಯಾಂಪ್ನ ವಿದ್ಯಾರ್ಥಿನಿ ಓರ್ವಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಳಸೆ ಸೋಣಗಿ ಮಕ್ಕಿಯಲ್ಲಿ ನಡೆದಿದೆ.
ಅನುಷಾ ಆಗೇರ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಅಂಕೋಲಾದ ಬಿ.ಸಿ ಕಾಲೇಜಿನಲ್ಲಿ ಬಿ.ಎಸ್.ಸಿ ದ್ವೀತಿಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಕ್ಯಾಂಪ್ನಲ್ಲಿ ಆರೋಗ್ಯವಾಗಿಯೆ ಇದ್ದು ಎಲ್ಲರಂತೆ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಳು ಎನ್ನಲಾಗಿದೆ.
ಆಕಸ್ಮಿಕವಾಗಿ ತಲೆ ಸುತ್ತು ಬಂದು ಬಿದ್ದು ವಾಂತಿ ಉಂಟಾಗಿದೆ ಎನ್ನಲಾಗಿದೆ, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆಗೆ ಮೊದಲೆ ಸಾವನ್ನಪ್ಪಿದ್ದಾಳೆ.