ದಾಂಡೇಲಿ: ದಾಂಡೇಲಿ ನವರಾತ್ರಿ ಉತ್ಸವ ಸಮಿತಿ ಆಶ್ರಯದಲ್ಲಿ ಹಳೆ ನಗರಸಭೆ ಮೈದಾನದಲ್ಲಿ ಆಯೋಜಿಸಿರುವ ಐದನೇ ವರ್ಷದ ನವರಾತ್ರಿ ಉತ್ಸವ , ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.ಸಾವಿರಾರು ಸಂಖ್ಯೆಯಲ್ಲಿ ದಿನನಿತ್ಯ ಭಕ್ತಾದಿಗಳು ದಾಂಡಿಯಾ ಪ್ರೀಯರು ಕಾರ್ಯಕ್ರಮದ ಆನಂದವನ್ನು ಸವಿಯುತ್ತಿದ್ದಾರೆ.ದಿನ ನಿತ್ಯವು ದುರ್ಗಾದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಾಂಡಿಯಾ ಉತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು ಸಾರ್ವಜನಿಕರೂ ಸಂತಸ ವ್ಯಕ್ತ ಪಡಿಸಿದ್ದಾರೆ.
ಮನರಂಜನಾ ಆಟ, ಮಾರಾಟ ಮಳಿಗೆಗಳ ಆಕರ್ಷಣೆ: ಉತ್ಸವದ ಅಂಗವಾಗಿ ವಿವಿಧ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಮನರಂಜನಾ ಆಟಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದೆ. ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಸುನೀಲ ಹೆಗಡೆ,ಕಾರ್ಯಾಧ್ಯಕ್ಷರಾದ ಆಶುತೋಶ ರಾಯ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹಾಣ ಹಾಗೂ ಸಮಿತಿಯ ಪ್ರಮುಖರಾದ ಟಿ.ಎಸ್. ಬಾಲಾಮಣಿ ,ಗುರು ಮಠಪತಿ,ಪ್ರಕಾಶ ಶೆಟ್ಟಿ ,ರೋಷನ ನೇತ್ರಾವಳಿ,ದಶರಥ ಬಂಡಿವಡ್ಡರ,ಬುದ್ಧವಂತಗೌಡಾ ಪಾಟೀಲ,ಮಿಥುನ ನಾಯಕ,ಪ್ರಶಾಂತ ಬಸುತಕರ ಇನ್ನಿತರ ಸದಸ್ಯರನ್ನ ದಾಂಡೇಲಿ ಜನರು ಧನ್ಯವಾದ ತಿಳಿಸಿದ್ದಾರೆ.
