ದಾಂಡೇಲಿ: ಪ್ರಜಾಪ್ರಭುತ್ವ ಎಂದರೆ ಅದು ಕೇವಲ ರಾಜಕೀಯ ಪ್ರಭುತ್ವ ಅಷ್ಟೇ ಅಲ್ಲ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಜಾಪ್ರಭುತ್ವದ ಅರಿವೂ ಎಲ್ಲರಿಗಿರಬೇಕು. ನಾವು ಕೇವಲ ಜಂಜಿ ಬಗ್ಗೆ ಮಾತನಾಡಿದರೆ ಸಾಲದು ಇಡೀ ದೇಶದ ಯೋಜನತೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ವೈವಸ್ಥೆಯ ವೈರುದ್ಯಗಳನ್ನ ಪ್ರಶ್ನೆ ಮಾಡದಿದ್ದರೆ ನಾಗರೀಕತೆ ಬೆಳೆಯಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ನುಡಿದರು.
ಅವರು ಸಂವಿಧಾನ ಓದು ಅಭಿಯಾನ ಹಾಗೂ ಸ್ಥಳೀಯ ಸಮಾನಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಬಾಮಣಗಿಯಲ್ಲಿ ಎರಡುದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂವಿದಾನ ಓದು- ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ದೇಶದ ಜನತೆ ಶಾಸಕಾಂಗ, ಕಾರ್ಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಖುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಒಂದಿಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಜನರಿಗೆ ಇದ್ದ ಆ ನಂಬಿಕೆಯೂ ಹೋದರೆ ಅರಾಜಕತೆ ಉದ್ಭವವಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ರಚನಾತ್ಮಕ ವಿಮರ್ಷೆಯಾಗುವುದು ತಪ್ಪೇನಲ್ಲ. ನ್ಯಾಯಾದೀಶರೂ ಆಕಾಶದಿಂದ ಬಂದವರಲ್ಲ. ನಮ್ಮೊಳಗಿಂದಲೇ ಹೋದವರು. ಸಮಾಜದೊಳಗಿರುವ ಎಲ್ಲವೂ ನ್ಯಾಯಾಂಗ ವ್ಯವಸ್ಥೆಯಲ್ಲಿದೆ ಎಂದ ನಾಗಮೋಹನ ದಾಸರು ಜಾತಿ ಅನ್ನೋದು ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ . ಅದು ಮಾನಸಿಕ ವ್ಯವಸ್ಥೆಯೂ ಆಗಿದೆ. ಈ ಮಾನಸಿಕ ವ್ಯವಸ್ಥೆಯೇ ಅಪಾಯಕಾರಿಯಾದುದು. ಈ ಬಗ್ಗೆ ಜಾಗೃತಿ ಅವಶ್ಯ. ಸಂವಿದಾನದೊಳಗಿನ ವಿಚಾರಗಳನ್ನ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ವರೂ ಸಾಮಾಜಿಕ ನ್ಯಾಯದ ರಕ್ಷಕರಾಗಬೇಕು ಎಂದರು.
ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದು ಸರಿಯಲ್ಲ.
ನ್ಯಾಯಾಲಯದ ತೀರ್ಪುಗಳನ್ನ ವಿಮರ್ಷೆ ಮಾಡುವ ಹಕ್ಕು ದೇಶದ ಪ್ರತಿಯೊಬ್ಬ ಜನರಿಗಿದೆ. ಆದರೆ ಆ ವಿಮರ್ಷೆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದ್ವಂಸ ಮಾಡುವಂತಿರಬಾರದು.
ಸಂವಿಂದಾನವೆಂದರೆ ಕೇವಲ ಕಾನೂನಲ್ಲ. ಸಂವಿಂದಾನ ಅದು ಯುವಜನರ ನಾಯಕತ್ವವಾಗಬೇಕು. ಸಂವಿಂದಾನವೇ ತತ್ವವಾಗಬೇಕು. ದಾರಿಯಾಗಬೇಕು. ಸಂವಿದಾನದ ಆಶಯವನ್ನ ಜನರಿಗೆ ತಲುಪಿಸುವ ಪ್ರಯತ್ನ ನಮ್ಮ ಅಭಿಯಾನದಿಂದ ನಡೆಯುತ್ತಿದೆ. ಈ ಜಿಲ್ಲೆಯ ಸಂಗಾತಿ ಡಾ ವಿಠ್ಠಲ ಭಂಡಾರಿಯವರ ಜೊತೆ ಸೇರಿ ನಾವು ಆರಂಬಿಸಿದ ಈ ಅಭಿಯಾನ ಇಂದು ಹಲವರ ಸಹಕಾರದೊಂದಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿ ಕಾರ್ಯ ಮಾಡುತ್ತಿದೆ ಎಂದರು.
ಹಿರಿಯ ಸಾಹಿತಿ ಸುಕನ್ಯಾ ಮಾರುತಿ, ಹೋರಾಟಗಾರ ಮಾವಳ್ಳಿ ಶಂಕರ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಎಸ್.ವೈ. ಗುರುಶಾಂತ, ಹೋರಾಟಗಾರ ರವೀಂದ್ರನಾಥ ನಾಯ್ಕ, ರಾಜಶೇಖರ ಕಿಗ್ಗಾ ಮುಂತಾದವರಿದ್ದರು.
ಜನಪ್ರಕಾಶನದ ಬಿ. ರಾಜಶೇಖರಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಸಂಘಟಕರಾದ ಡಿ. ಸ್ಯಾಮಸನ್, ಕೆ. ಎಚ್. ಪಾಟೀಲ್, ರತ್ನದೀಪಾ ಎನ್.ಎಮ್. ಸಹಕರಿಸಿದರು. ರಾಜ್ಯದೆಲ್ಲಡೆಯಿಂದ ನೂರಕ್ಕೂ ಹೆಚ್ಚು ಪ್ರತಿನಿದಿಗಳು ಭಾಗವಹಿಸಿದ್ದರು.
.
