
ದಾಂಡೇಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದರೂ ಸಹ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಸುವುದು ಕಂಡು ಬಂದ ಕಾರಣ ಇಂದು ಬೆಳಿಗ್ಗೆ ದಾಂಡೇಲಿ ನಗರಸಭಾ ವ್ಯಾಪ್ತಿಯಲ್ಲಿ ಕಾರವಾರದ ಪರಿಸರ ಅಧಿಕಾರಿಯಾದ ಬಿ.ಕೆ. ಸಂತೋಷ್,
ಮತ್ತು ದಾಂಡೇಲಿಯ ಪೌರಾಯುಕ್ತರಾದ ವಿವೇಕ ಬನ್ನೆ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರಾದ , ವಿಲಾಸಕುಮಾರ್ ದೇವಕರ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹಠಾತ್ತನೆ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ನ ಮಾರಾಟವನ್ನು ತಡೆಗಟ್ಟಲು ಹೊಲ್ಸೇಲ್ ಅಂಗಡಿಗಳು / ಹೂ ಹಣ್ಣು ಅಂಗಡಿಗಳು / ಕಿರಾಣಿ ಅಂಗಡಿಗಳು / ಬೇಕರಿಗಳ ಮೇಲೆ ದಾಳಿ ಮಾಡಿ ಸುಮಾರು 210 ಕೆಜಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು ವಶಪಡಿಸಿಕೊಂಡು ಒಟ್ಟು ರೂ. 11,500/- ದಂಡವನ್ನು ಅಂಗಡಿ ಮಾಲೀಕರಿಗೆ /ಬೀದಿ ಬದಿ ವ್ಯಾಪಾರಿಗಳಿಗೆ ವಿಧಿಸಿದ್ದಾರೆ.
ಸದರಿ ಪ್ರದೇಶಗಳ ವ್ಯಾಪಾರಿಗಳಲ್ಲಿ ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು (ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ ಉಪಯೋಗಿಸದಂತೆ ಜಾಗೃತಿ ಮೂಡಿಸಿ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಷೇಧಿಸಿ ಬದಲಾಗಿ ಅಡಿಕೆ ಎಲೆ / ಕಟ್ಟಿಗೆ / ಗಾಜು / ಪೇಪರ್ / ಸ್ಟೀಲ್ನಿಂದ ತಯಾರಿಸಿದ ವಸ್ತುಗಳನ್ನು ಬಳಸುವಂತೆ ತಿಳಿಸಲಾಯಿತು.
ಕೇವಲ ಬಟ್ಟೆ ಚೀಲಗಳನ್ನು ಬಳಸುವಂತೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ತಿಳಿವಳಿಕೆಯನ್ನು ಅಂಗಡಿದಾರರಿಗೆ ನೀಡಿದರು.ಇ ಸಂದರ್ಭದಲ್ಲಿ ನಗರಸಭೆಯ ಶುಭಂ ರಾಯ್ಕರ,ಹಾಗೂ ವಿಘ್ನೇಶ್ವರ ನಾಯ್ಕ ಉಪಸ್ಥಿತರಿದ್ದರು