ದಾಂಡೇಲಿ : ಜನಪರ ಕಾಳಜಿಯ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು 16 ಬಾರಿ ಬಜೆಟ್ ಮಂಡಿಸಿ ದಾಖಲೆಯನ್ನು ಮಾಡುವ ಜೊತೆಗೆ ಈ ಬಾರಿ ಬಜೆಟ್ ನ್ನು ಜನಪರವಾದ ಯೋಜನೆ ಹಾಗೂ ಸಂಗತಿಗಳನ್ನು ಇಟ್ಟುಕೊಂಡು ಮಂಡಿಸಿದ್ದಾರೆ. ಬಜೆಟ್ ನಲ್ಲಿ ಬುಡಕಟ್ಟುಗಳ ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ . ಕೃಷಿ, ತೋಟಗಾರಿಕೆ, ಮೀನುಗಾರಿಕೆಗೆ ಉತ್ತೇಜನ ನೀಡಲಾಗಿದೆ. ವಿಶೇಷವಾಗಿ ಜೋಯಿಡಾದ ಸಾವಯವ ಕೃಷಿಗೆ, ಹಳಿಯಾಳದ ನೀರಾವರಿಗೆ ಯೋಜನೆ ನೀಡಲಾಗಿದೆ. ಈ ಬಜೆಟ್ ನಲ್ಲಿ ರಾಜ್ಯದ ಸರ್ವ ಜನತೆಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಾಗಿದ್ದು, ಇದು ಅಭಿವೃದ್ಧಿ ಪರ ಬಜೆಟ್ ಆಗಿದೆ.
ಮೋಹನ ಕೆ. ಹಲವಾಯಿ
ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ದಾಂಡೇಲಿ
ಯಾವುದೇ ಹೊಸ ಯೋಜನೆ ಜಾರಿಯಾಗದ ಸಾಲದ ಸುಳಿಯಲ್ಲಿ ಕಂಗಾಲಾದ , ಪ್ರತಿಯೊಬ್ಬ ಜನ ಸಾಮಾನ್ಯರ ಮೇಲೆ ಸುಮಾರು 01 ಲಕ್ಷ ರೂಪಾಯಿ ಸಾಲದ ಹೊರೆ ಹೊರೆಸಿದ ಬಜೆಟ್ ಇದಾಗಿದೆ.
ವೋಟ್ ಬ್ಯಾಂಕಿನ ರಾಜಕಾರಣದ, ಒಂದು ಸಮುದಾಯದ ತುಷ್ಟೀಕರಣದ , ಓಲೈಕೆಯ ಬಜೆಟ್ ಇದು. ಬಹುಸಂಖ್ಯಾತರನ್ನು ಕಡೆಗೆನಿಸಿದ ಬಜೆಟ್ ಇದಾಗಿದೆ.
ಗುರು ಮಠಪತಿ
ತಾಲೂಕ ಉಪಾಧ್ಯಕ್ಷರು ಬಿಜೆಪಿ ದಾಂಡೇಲಿ
ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ರಾಜ್ಯದ ಯುವಜನತೆಯು ಮುಖ್ಯಮಂತ್ರಿಗಳು ಉದ್ಯೋಗ ನೀತಿ ಜಾರಿಗೊಳಿಸಿ ಉದ್ಯೋಗ ಭರವಸೆ ನೀಡುತ್ತಾರೆಂದು ಭಾವಿಸಿದ್ದರು, ಆದರೆ ಮಾನ್ಯ ಸಿದ್ರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಯುವಜನರ ಬದುಕಿನ ಭದ್ರತೆಯ ಕುರಿತು ಯಾವುದೆ ಸ್ಪಷ್ಟ ಕಣ್ಣೋಟ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ಡಿ.ಸ್ಯಾಮಸನ ಕಾರ್ಯದರ್ಶಿ
ಡಿ.ವೈ.ಎಫ.ಐ