
ಜೋಯಿಡಾ :
ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಮಿನಿ ಅಶೋಕ ಲೇಲ್ಯಾಂಡ ವಾಹನ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ಇಂದು ಮಧ್ಯಾನ ನಡೆದಿದೆ.
ಅನಮೋಡ್ ತನಿಖಾ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬಂದಂತಹ ಖಚಿತ ಮಾಹಿತಿಯ ಮೇರೆಗೆ, ನೊಂದಣಿ ಸಂಖ್ಯೆ KA 68 G 5849 ವಾಹನವನ್ನು ತಪಾಸಣೆ ಮಾಡಿದಾಗ ಅದರ ಹಿಂಭಾಗದಲ್ಲಿ ಅಕ್ರಮವಾಗಿ Bullet-77 cashew fenny ಯ 48 ಬಾಟಲಿ ಗಳನ್ನು ಎರಡು ಮೂಟೆಗಳಲ್ಲಿ ತೆಂಗಿನ ಗರಿಗಳ ಅಡಿಯಲ್ಲಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ,ವಾಹನ ಹಾಗೂ ಮದ್ಯದ ಬಾಟಲಿಗಳನ್ನು ಜಪ್ತುಪಡಿಸಿ, ಆರೋಪಿಯಾದ ಮೊಹಮ್ಮದ ಅಲಿ ಕರಜಗಿ ಬಿನ್ ಅಜಮುದ್ದೀನ್ ರಾಣಿಬೆನ್ನೂರು ತಾಲೂಕ ರಾಣಿಬೆನ್ನೂರು, ಹಾವೇರಿ ಜಿಲ್ಲೆ ಈತನನ್ನು ದಸ್ತಗಿರ್ ಮಾಡಿ ಮೊಕದ್ದಮೆ ಯನ್ನು ದಾಖಲಿಸಿಕೊಳ್ಳಲಾಗಿದೆ. ಜಪ್ತುಪಡಿಸಿದ ವಾಹನದ ಅಂದಾಜು ಬೆಲೆ ರೂ.8 ಲಕ್ಷ ಗಳಾಗಿದ್ದು, ಮದ್ಯದ ಅಂದಾಜು ಬೆಲೆ ರೂ. 12000/-ಗಳಾಗಿರುತ್ತದೆ. ಅಬಕಾರಿ ಜಂಟಿ- ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಮಂಗಳೂರು ರವರ ನಿರ್ದೇಶನ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ.ಕನ್ನಡ ಜಿಲ್ಲೆ, ರವರ ಮಾರ್ಗದರ್ಶನದ ಮೇರೆಗೆ, ಈ ರಸ್ತೆಗಾವಲು ಕಾರ್ಯಾಚರಣೆಯನ್ನು ಶ್ರೀ ಟಿ.ಬಿ. ಮಲ್ಲಣ್ಣವರ್ ಅಬಕಾರಿ ಉಪ- ನಿರೀಕ್ಷಕರು ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ, ವಾಹನ ತಪಾಸಣೆಯ ಸಂದರ್ಭದಲ್ಲಿ ಶ್ರೀಕಾಂತ ಜಾಧವ ಅ.ಮು.ಪೇ. ದೀಪಕ ಬಾರಾಮತಿ ಅ. ಪೇ. ಶ್ರೀಶೈಲ ಹಡಪದ ಅ.ಪೇ. ಹಾಗೂ ಮಹಾಂತೇಶ ಹೊನ್ನೂರ್ ಅ.ಪೇ. ಉಪಸ್ಥಿತರಿದ್ದರು.