ದಾಂಡೇಲಿ : ಪೋಲಿಯೊ ನಿರ್ಮೂಲನಾ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಾಂಡೇಲಿ ರೋಟರಿ ಕ್ಲಬ್ ವತಿಯಿಂದ ಜನ ಜಾಗೃತಿಗಾಗಿ ಕಾರ್ ರ್ಯಾಲಿಯನ್ನು ಶನಿವಾರ ಆಯೋಜಿಸಲಾಗಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ಮಿಥುನ್ ನಾಯಕ ಅವರು ಕಾರ್ ರ್ಯಾಲಿಗೆ ಚಾಲನೆ ನೀಡಿದರು. ಈ ಜಾಗೃತಿ ಕಾರ್ ರ್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಪೋಲಿಯೊ ಲಸಿಕೆ ಬಗ್ಗೆ, ಪೋಲಿಯೊ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಿತು. “ಪೋಲಿಯೊ ಮುಕ್ತ ಭಾರತ ನಮ್ಮ ಗುರಿ”, “ಎಂಡ್ ಪೋಲಿಯೊ ನೌ” ಎಂಬ ಘೋಷಣೆಗಳೊಂದಿಗೆ ರ್ಯಾಲಿ ನಡೆಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಡಾ. ಜ್ಞಾನದೀಪ್ ಗಾಂವಕರ, ಖಜಾಂಚಿ ಅಭಿಷೇಕ್ ಕನ್ಯಾಡಿ, ಹಾಗೂ ರೋಟರಿ ಕ್ಲಬ್ ಪ್ರಮುಖರಾದ ಲಿಯೋ ಪಿಂಟೋ, ಎ.ಜಿ. ಬಿರಾದಾರ, ಆರ್.ಪಿ.ನಾಯ್ಕ, ರಾಜೇಶ್ ತಿವಾರಿ, ಎಸ್. ಸೋಮಕುಮಾರ್, ರವಿಕುಮಾರ್ ನಾಯಕ, ರಾಹುಲ್ ಬಾವಾಜಿ, ಜೋಸೆಫ್ ಗೋನ್ಸಾಲಿಸ್, ಡಾ. ಅನೂಪ್ ಮಾಡ್ದೋಳ್ಕರ್, ಡಾ. ಪರಶುರಾಮ್ ಸಾಂಬ್ರೇಕರ್, ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ವತಿಯಿಂದ ಪೋಲಿಯೊ ನಿರ್ಮೂಲನೆಗಾಗಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ ರ್ಯಾಲಿಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
