
ದಾಂಡೇಲಿ: ಹೋಂ ಸ್ಟೇ ಹಾಗೂ ರೇಸಾಟ್ ಗಳಲ್ಲಿ ಯಾರನ್ನೇ ಕೆಲಸಕ್ಕೆ ತೆಗೆದುಕೊಳ್ಳಲು ಮುನ್ನಾ ಅವರ ಹಿನ್ನೆಲೆಯ ಗಮನಿಸಬೇಕು ಹಾಗೂ ಸೂಕ್ತ ದಾಖಲೆಗಳನ್ನು ಪಡೆಯಬೇಕು ಎಂದು ದಾಂಡೇಲಿ ಸಿಪಿಐ ಜಯಪಾಲ್ ಪಾಟೀಲ ಹೇಳಿದರು.
ಹಂಪಿ ಸಮೀಪ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಲ್ಲಿ ಸೂಕ್ತ ಬಂದೋಬಸ್ತ್ ಗೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಠಾಣೆಯ ಆವರಣದಲ್ಲಿ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲಿಕರ ಸಭೆಯಲ್ಲಿ ಮಾತನಾಡಿದರು.
ದಾಂಡೇಲಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೆಸಾರ್ಟ್ ಹೋಂ ಸ್ಟೇ ಗಳಲ್ಲಿ ಉತ್ತರ ಭಾರತದವರು ಹೆಚ್ಚಾಗಿದ್ದು ಅವರ ಹಿನ್ನೆಲೆಯನ್ನು ಇಲಾಖೆಯ ಆ್ಯಪ್ ಮೂಲಕ ಪರಿಶೀಲನೆ ಮಾಡಬೇಕು ಹಾಗೂ ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳಬೇಕು.
ಕಾಡಿನಲ್ಲಿ ಪಕ್ಷಿ ವೀಕ್ಷಣೆಗೆ, ಟ್ರೆಕಿಂಗ್ ಗೆ ತೆರಳುವಾಗ ಅಗತ್ಯ ಮುನ್ನೆಚ್ಚರಿಕೆ ಹಾಗೂ ಬಾರ್ಡಿ ಕ್ಯಾಮೆರಾ ಧರಿಸಿ ಹೋಗು ಬೇಕು.ಅಪ್ರಾಪ್ತ ವಯಸ್ಕರಿಗೆ ಯಾವುದೇ ಕಾರಣಕ್ಕೆ ರೆಸಾರ್ಟ್ ನೀಡಬಾರದು.ವನ್ಯ ಜೀವಿಗಳಿಗೆ ತೊಂದರೆ ಆಗದಂತೆ ಧ್ವನಿ ವರ್ಧಕ ಬಳಿಕಗೆ ಕಡಿವಾಣ ಇರಬೇಕು.
ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನಾವಲಗಿ ಮಾತನಾಡಿ ಮಧ್ಯವರ್ತಿಗಳ ಹಣ ಪಡೆದು ಪ್ರವಾಸಿಗರಿಗೆ ಮೋಸ ಮಾಡಿದ ಪ್ರಕರಣ ಸೇರಿದಂತೆ ಅನೇಕರು ರೆಸಾರ್ಟ್ ಗಳಲ್ಲಿ ಊಟಕ್ಕೆ ಸಂಬಂಧಿಸಿದಂತೆ ದೂರು ಕೇಳಿಬರುತ್ತಿದೆ. ರೆಸಾರ್ಟ್ ಮಾಲಕರು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮಧ್ಯಪಾನಕ್ಕೆ ಅವಕಾಶ ನೀಡಬಾರದು. ಕಾಡಿನ ಸೌಂದರ್ಯವನ್ನು ಸವಿದು ಜಲಕ್ರೀಡೆ ಮಜ ಅನುಭವಿಸಬೇಕು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.
ದಾಂಡೇಲಿ ನಗರದ ಮತ್ತು ಗ್ರಾಮೀಣ ಭಾಗದಲ್ಲಿ ಸ 87 ಹೋಂ ಸ್ಟೇಗಳು ಹಾಗೂ 7 ರೆಸಾರ್ಟ್ ಗಳಿದ್ದು ಇವುಗಳಲ್ಲಿ ಕೆಲವೊಂದು ಸ್ಥಗಿತಗೊಂಡಿವೆ. ವಾರಾಂತ್ಯದ ಸೇರಿದಂತೆ ಇತರೆ ದಿನಗಳಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ. ದಾಂಡೇಲಿ ಪ್ರವಾಸೋದ್ಯಮಕ್ಕೆ ಯಾವುದೇ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ರೆಸಾರ್ಟ್ ಗಳಲ್ಲಿ ಕೆಲಸಕ್ಕೆ ಇರುವರು ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಇಲಾಖೆ ವತಿಯಿಂದ ಬೀಟ್ ಪೋಲಿಸರನ್ನು ಕಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಗಳಾದ ಅಮೀನ್ ಅತ್ತಾರ, ಜಗದೀಶ ನಾಯಕ ಪೋಲಿಸ ಸಿಬ್ಬಂದಿ ಇದ್ದರು.
ಸಭೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲಕರು ಹಾಜರಿದ್ದರು.