
ಕಾರವಾರ:
ಜಿಲ್ಲೆಯಲ್ಲಿ ಬುಧವಾರ 43 ಡಿಗ್ರಿ ತಾಪಮಾನ ದಾಖಲಾಗಿದೆ. ಈಬಗ್ಗೆ ಕಳೆದ ಒಂದು ತಿಂಗಳಿನಿಂದ ವೈದ್ಯರಿಗೆ ತರಬೇತಿ ನೀಡಲಾಗಿದೆ. ಆಶಾಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮುಇಡಿಸಲಾಗುತ್ತಿದೆ ಎಂದು ಡಿಎಚ್ಒ ಡಾ. ನೀರಜ್ ತಿಳಿಸಿದ್ದಾರೆ.
ಕಾರ್ವಾರದಲ್ಲಿ ಮಾತನಾಡಿದ ಅವರು ಜನರು ಈ ಸಮಯದಲ್ಲಿ ಮಧ್ಯಾಹ್ನದ ಹೊತ್ತು ಹೊರಗೆ ಬರಬಾರದು. ಬರಬೇಕಾದ ಸಮಯದಲ್ಲಿ ಚತ್ರಿ ಇರಬೇಕು ಅಥವಾ ಕ್ಯಾಪ್ ಧರಿಸಬೇಕು. ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ಹಣ್ಣಿನ ರಸಗಳು ಹಾಗೂ ನೀರನ್ನು ಹೆಚ್ಚಾಗಿ ಕುಡಿಯಬೇಕು. ಗರ್ಭಿಣಿಯರು ಹಾಗು ಸಣ್ಣ ಮಕ್ಕಳು ಮನೆಯಿಂದ ಹೊರ ಬರುವುದನ್ನು ಆದಷ್ಟು ಕಡಿಮೆ ಮಾಡಬೇಕು. ಬಿಸಿಲಿನಿಂದ ಬಳಲುವರಿಗೆ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿಯೂ ಐದು ಬೆಡ್ ಮೀಸಲಿಡಲಾಗಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ತಾಪಮಾನ ಹೆಚ್ಚಿರುವ ಕಾರಣ ಜನರಲ್ಲಿಯೂ ಸಹನಶಕ್ತಿ ಇದೆ. ಹೀಗಾಗಿ ಹೆಚ್ಚಿನ ಸಮಸ್ಯೆ ಕಂಡುಬರಿವುದಿಲ್ಲ. ಆದರೂ ಸಾರ್ವಜನಿಕರು ಹೆಚ್ವಿನ ನಿಗಾ ವಹಿಸಿ ಬಿಸಿಲಿನಿಂದ ದೂರ ಇರಬೇಕು ಎಂದಿದ್ದಾರೆ.