
ದಾಂಡೇಲಿ: ತಾಲೂಕಿನಲ್ಲಿ ಕ್ರಿಕೆಟ್ ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.
ಈ ಅಕಾಡೆಮಿಯ ಅಧ್ಯಕ್ಷರಾಗಿ ಅನಿಲ್ ಪಾಟ್ನೇಕರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್ ತಿವಾರಿ, ಕಾರ್ಯದರ್ಶಿಗಳಾಗಿ ಸೋಮಕುಮಾರ್, ಸಹಕಾರ್ಯದರ್ಶಿಗಳಾಗಿ ಇಮಾಮ ಸರವರ, ಕೋಶಾಧ್ಯಕ್ಷರಾಗಿ ಸಚಿನ ಕಾಮತ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿ ಪ್ರಕಾಶ್ ಜೈನ್, ಸುಭಾಷ ಪ್ರಧಾನ, ಹೇಮಂತ್ ವೈಷ್ಣವ, ಪ್ರವೀಣ ಮಿಶ್ರಾ, ಯೋಗೇಶ್ ಎ., ಹನುಮಾನ್ ಶರ್ಮಾ, ನಿರ್ಮಲ್ ಶರ್ಮಾ, ಸಾಮ್ಯುಯೆಲ್ ಎಂ. ಆಯ್ಕೆಗೊಂಡಿದ್ದಾರೆ.
ಈ ಅಕಾಡೆಮಿಯ ಮೂಲಕ ಏಪ್ರಿಲ್ ಮೊದಲ ವಾರದಲ್ಲಿ ಯುವ ಪ್ರತಿಭೆಗಳಿಗೆ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು. ಹಾಗೂ ಕ್ರಿಕೆಟ್ ಆಸಕ್ತ ವಿದ್ಯಾರ್ಥಿ ಹಾಗೂ ಯುವಜನರಿಗೆ ತರಬೇತಿ ನೀಡಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಅಧ್ಯಕ್ಷ ಅನಿಲ್ ಪಾಟ್ನೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.