
ಶಿರಸಿ :
ಪೊಲೀಸ್ ವೃತ್ತಿಯಲ್ಲಿ ಸಾಧನೆಮಾಡಿರುವ ಶಿರಸಿ ನಗರ ಠಾಣೆ ಪಿಎಸ್ಆಯ್ ನಾಗಪ್ಪ ಬಿ ಇವರಿಗೆ 2022ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.
ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಆಯ್ ಆಗಿ ತಮ್ಮ ನಿಖರವಾದ ಸೇವೆಯ ಮೂಲಕ ಜನಸ್ನೇಹಿ ಪಿಎಸ್ಆಯ್ ಎಂದೇ ಗುರುತಿಸಿಕೊಂಡಿದ್ದ ಅವರು ಕಾರವಾರಕ್ಕೆ ವರ್ಗಾವಣೆಗೊಂಡಿದ್ದರು. ಬಳಿಕ ಅವರು ಮತ್ತೆ ಶಿರಸಿ ನಗರ ಠಾಣೆಗೆ ಬಂದು ಪಿಎಸ್ಆಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನವರಾಗಿರುವ ನಾಗಪ್ಪ ರವರು ಗುಲ್ಬರ್ಗದಲ್ಲಿ ಪಿಎಸ್ಆಯ್ ಆಗಿ ನಿಯೋಜನೆಗೊಂಡ ಬಳಿಕ ಅವರು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಪಿಎಸ್ಆಯ್ ಆಗಿ ಸೇವೆ ಸಲ್ಲಿಸಿದರು.
ಇನ್ನೂ ಕಾರವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಸಹ ಉತ್ತಮ ಸೇವೆ ಸಲ್ಲಿಸಿದ್ದರು, ಇವರ ಸಾಧನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.