
ಕಾರವಾರ:
ನಗರದ ಕೋಡಿಬಾಗದ ಬಳಿ ಕಾಳಿನದಿಯ ಹಳೆಯ ಸೇತುವೆಯ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಸೇತುವೆಯ ಅವಶೇಷವು ಹೊಸ ಸೇತುವೆ ಕಂಬಕ್ಕೆ ತಾಗಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯು ಕುಸಿದು ಬಿದ್ದ ಕಾರಣ ಸೇತುವೆಯ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಬಾರ್ಜ್ ಹಾಗೂ ಕ್ರೇನ್ ಗಳ ಮೂಲಕ ಕಾರ್ಯಾಚರಣೆ ಮಾಡುವ ವೇಳೆ ಕ್ರೇನ್ ಸಮತೋಲನ ತಪ್ಪಿದ್ದು, ಕ್ರೇನ್ ಗೆ ಕಟ್ಟಿದ್ದ ಸೇತುವೆಯ ಭಾಗವು ಹೊಸ ಸೇತುವೆಯ ಕಂಬಕ್ಕೆ ತಾಗಿದೆ. ಸದ್ಯ ಹೊಸ ಸೇತುಯಲ್ಲಿಯೇ ದ್ವಿಮುಖ ಸಂಚಾರ ನಡೆಯುತ್ತಿರುವ ಕಾರಣ ಕೆಲ ಸಮಯ ಪ್ರಯಾಣಿಕರಲ್ಲಿ ಆತಂಕ ಎದುರಾಗಿತ್ತು. ಬಳಿಕ ತಹಸೀಲ್ದಾರ್ ನಿಶ್ಚಲ ನರೋನಾ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕ ಭೇಟಿ ನೀಡಿದ್ದು ಹೊಸ ಸೇತುವೆಗೆ ಯಾವುದೇ ಹಾನಿಯಾಗಿಲ್ಲ ಸಾರ್ವಜನಿಕರು ಭಯ ಪಡಿವ ಅಗತ್ಯವಿಲ್ಲ ಅಲ್ಲದೇ ಹೊಸ ಸೇತುವೆಯಲ್ಲಿ ಸಂಚಾರಕ್ಕು ಯಾವುದೇ ತೊಂದರೆ ಇಲ್ಲ ಎಂದು ತಹಸೀಲ್ದಾರ್ ನಿಶ್ಚಲ ನರೊನಾ ತಿಳಿಸಿದ್ದಾರೆ.